Home » BJP Leader Murder: ಬಾಂಬ್ ಎಸೆದು ಬಿಜೆಪಿ ಮುಖಂಡನ ಬರ್ಬರ ಹತ್ಯೆ!

BJP Leader Murder: ಬಾಂಬ್ ಎಸೆದು ಬಿಜೆಪಿ ಮುಖಂಡನ ಬರ್ಬರ ಹತ್ಯೆ!

0 comments
BJP Leader Murder

BJP Leader Murder: ತಮಿಳುನಾಡಿನ (Tamil Nadu) ಬಿಜೆಪಿ(BJP) ಮುಖಂಡನನ್ನು ಅಪರಿಚಿತರ ತಂಡದವರು ಏಕಾಏಕಿ ಅಡ್ಡಗಟ್ಟಿ ಭೀಕರವಾಗಿ ಕೊಲೆ (BJP Leader Murder) ಮಾಡಿರುವ ಘಟನೆ ತಮಿಳುನಾಡಿನ ಶ್ರೀ ಪೆರಂಬೂರು ಬಳಿಯ ನಜರತ್​ಪೇಟೆ ಬಳಿ ನಡೆದಿದೆ.

ತಮಿಖಳುನಾಡು ಶ್ರೀಪೆರಂಬೂರು ಸಮೀಪದ ವಲರಪುರಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಪಿ.ಜಿ.ಶಂಕರ್​(42) ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಬಿಜೆಪಿ ಎಸ್ಸಿ-ಎಸ್ಟಿ ವಿಭಾಗದ ರಾಜ್ಯ ಖಜಾಂಜಿ ಆಗಿರುವ ಶಂಕರ್ ಕಾರ್ಯಕ್ರಮ ಒಂದನ್ನು ಮುಗಿಸಿಕೊಂಡು ಮನೆಗೆ ಮರುಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಪೂನಮಲ್ಲೆ ಹೆದ್ದಾರಿಯ ನಸರತ್ಪೇಟೆ ಸಿಗ್ನಲ್ ಸಮೀಪ ಶಂಕರ್ ಅವರ ಕಾರು ಬರುವುದನ್ನು ಕಾದು ಕುಳಿತಿದ್ದ ತಂಡವೊಂದು ಇದ್ದಕ್ಕಿದಂತೆ ಶಂಕರ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಅಷ್ಟೇ ಅಲ್ಲದೆ, ದುಷ್ಕರ್ಮಿಗಳು ಕಾರಿನ ಮೇಲೆ ಕಂಟ್ರಿ ಬಾಂಬ್ ಎಸೆದಿದ್ದು, ಇದರಿಂದ ಗಾಬರಿಗೊಂಡ ಶಂಕರ್​ ಕಾರಿಂದ ಇಳಿದು ಓಡಿ ಹೋಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಇದರಿಂದ ಆಗಂತುಕರು ಶಂಕರ್ ಅವರನ್ನು ಹಿಂಬಾಲಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ಪಡೆದ ನಸರತ್‌ಪೇಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ಶಂಕರ್ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚೆನ್ನೈನ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪೊಲೀಸರು ಘಟನೆ ನಡೆದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಆರೋಪವನ್ನು ದಾಖಲಿಸಿದ್ದಾರೆ. ಶಂಕರ್ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣಗಳು ಇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಿಪಿಜಿ ಶಂಕರ್ (42) , ಇವರು ಶ್ರೀಪೆರಂಬದೂರು ಪಕ್ಕದ ವಲರಪುರಂ ಪಂಚಾಯತ್ ಅಧ್ಯಕ್ಷರಾಗಿದ್ದರು. ತಮಿಳುನಾಡು ಬಿಜೆಪಿಯ ಎಸ್‌ಸಿ-ಎಸ್‌ಟಿ ವಿಭಾಗದ ರಾಜ್ಯ ಖಜಾಂಚಿಯೂ ಆಗಿದ್ದರು. ಗುರುವಾರ ರಾತ್ರಿ ಚೆನ್ನೈನ ಪೂನಮಲ್ಲೆ ಬಳಿ ಬಿಜೆಪಿ ಪಂಚಾಯತ್ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಒಂಬತ್ತು ಮಂದಿ ಶುಕ್ರವಾರ ಮಧ್ಯಾಹ್ನ ಎಗ್ಮೋರ್ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

 

You may also like

Leave a Comment