Home » Pramod Muthalik : ದುಡ್ಡಿಗೋಸ್ಕರ ನಾನು ಕಾರ್ಕಳಕ್ಕೆ ಬಂದಿಲ್ಲ , ಡೋಂಗಿ ಹಿಂದೂವಾದ, ಭ್ರಷ್ಟಾಚಾರ ವಿರುದ್ಧ ಹೋರಾಡಲು ಸ್ಪರ್ಧೆ – ಪ್ರಮೋದ್ ಮುತಾಲಿಕ್

Pramod Muthalik : ದುಡ್ಡಿಗೋಸ್ಕರ ನಾನು ಕಾರ್ಕಳಕ್ಕೆ ಬಂದಿಲ್ಲ , ಡೋಂಗಿ ಹಿಂದೂವಾದ, ಭ್ರಷ್ಟಾಚಾರ ವಿರುದ್ಧ ಹೋರಾಡಲು ಸ್ಪರ್ಧೆ – ಪ್ರಮೋದ್ ಮುತಾಲಿಕ್

by Praveen Chennavara
0 comments

ಉಡುಪಿ: ಸಚಿವ ಸುನಿಲ್ ಕುಮಾರ್ ಆತಂಕಕ್ಕೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಾಗಿಲ್ಲ. ದುಡ್ಡು ಗಳಿಸಬೇಕಾಗಿದ್ದರೆ ನನಗೆ 45 ವರ್ಷ ಬೇಕಾಗಿರಲಿಲ್ಲ. ನಾನು ದುಡ್ಡಿಗೋಸ್ಕರ ಕಾರ್ಕಳಕ್ಕೆ ಬಂದಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಚಿವ ಸುನೀಲ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಉಡುಪಿಯಲ್ಲಿಂದು ಮಾತನಾಡಿದ ಮುತಾಲಿಕ್ ಅವರು, ಸುನಿಲ್ ಕುಮಾರ್ ಎಲ್ಲಿದ್ದರು? ಈಗ ಎಲ್ಲಿ ತಲುಪಿದ್ದಾರೆ. ಈ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರು ಹತಾಶೆಯ ಮನೋಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಮುತಾಲಿಕ್ ಹಣ ಮಾಡುವವನಲ್ಲ ಈ ಆರೋಪ ಸುನೀಲ್‌ಗೆ ಶೋಭೆ ತರುವುದಿಲ್ಲ ಎಂದರು.

ಕಾರ್ಯಕರ್ತರ ಓಡಾಟ, ಊಟ, ತಿಂಡಿ ಪ್ರವಾಸಕ್ಕೆ ನೂರು ರೂಪಾಯಿ ಕೇಳಿದ್ದೇನೆ. ಕಾರ್ಕಳದ 40 ಹಳ್ಳಿ ತಲುಪಲು ನಾನೊಬ್ಬನೆ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ. ಡೋಂಗಿ ಹಿಂದೂವಾದ, ಭ್ರಷ್ಟಾಚಾರ ವಿರುದ್ಧ ನಾನು ಹೋರಾಡಲು ಬಂದಿದ್ದೇನೆ. ಅಸಲಿ ಹಿಂದುತ್ವ ತೋರಿಸಿ ಕೊಡಲು ಕಾರ್ಕಳಕ್ಕೆ ಬಂದಿದ್ದೇನೆ. ಮತದ ಜೊತೆ ಮತದಾರರಿಂದ ನೂರು ರೂಪಾಯಿ ಕೇಳುತ್ತಿದ್ದೇನೆ. ನಾನು ನಿಮ್ಮ ಹಾಗೆ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್, ಬೇನಾಮಿ ಜಮೀನು ಮಾಡಿದ್ದರೆ ಹಣ ಕೇಳುತ್ತಿರಲಿಲ್ಲ. ನನ್ನ ಬಳಿ ಏನೂ ಇಲ್ಲ. ಅದಕ್ಕೆ ನಾನು ಜನರಿಂದ ಹಣ ಕೇಳುತ್ತಿದ್ದೇನೆ ತಿಳಿಸಿದ್ದಾರೆ.

You may also like

Leave a Comment