Home » ಪ್ರಮೋದ್ ಮುತಾಲಿಕ್ ಕೋಲಾರಕ್ಕೆ ದಿಢೀರ್ ಭೇಟಿ| ಆಯೋಜಕರಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಸ್ ಪಿ!!!

ಪ್ರಮೋದ್ ಮುತಾಲಿಕ್ ಕೋಲಾರಕ್ಕೆ ದಿಢೀರ್ ಭೇಟಿ| ಆಯೋಜಕರಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಸ್ ಪಿ!!!

by Mallika
0 comments

ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಕೋಲಾರದಲ್ಲಿನ ಶೋಭಯಾತ್ರೆಗೆ ದಿಢೀರ್ ಪ್ರತ್ಯಕ್ಷವಾಗಿ, ಪೊಲೀಸರು ವಿರೋಧ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಮುತಾಲಿಕ್ ಅವರನ್ನು ಸುತ್ತುವರಿದಿದ್ದು, 20 ನಿಮಿಷದಲ್ಲಿ ಹೊರ ಕಳಿಸಬೇಕು ಎಂದು ಆಯೋಜಕರಿಗೆ ಎಸ್ ಪಿ ದೇವರಾಜ್ ಖಡಕ್ ಎಚ್ಚರಿಕೆ ಕೂಡಾ ನೀಡಿದ್ದಾರೆ. ಅನುಮತಿ ಇಲ್ಲದೇ ಮುತಾಲಿಕ್ ಕೋಲಾರಕ್ಕೆ ಬಂದಿದ್ದಾರೆ ಎಂದು ಪೊಲೀಸರು ಶೋಭಾಯಾತ್ರೆಗೆ ತಡೆಯೊಡ್ಡಿದ್ದಾರೆ.

ಪರಿಣಾಮವಾಗಿ ಕೋಲಾರ ಎಂ.ಜಿ.ರಸ್ತೆಯಲ್ಲಿನ ಛತ್ರಪತಿ ಶಿವಾಜಿಗೆ ಹಾರ ಹಾಕಿ,ಕೇಸರಿ ಬಾವುಟ ಹಾರಿಸಿ ಪ್ರಮೋದ್ ಮುತಾಲಿಕ್ ಧ್ವಜಾರೋಹಣ ಮಾಡಿ ಅಲ್ಲಿಂದ ವಾಪಸ್ ಹೋದರು.

You may also like

Leave a Comment