Home » ಆಳದ ಪ್ರಪಾತಕ್ಕೆ ಬಿದ್ದ ಖಾಸಗಿ ಬಸ್, ಶಾಲಾ ಮಕ್ಕಳು ಸೇರಿದಂತೆ 16ಕ್ಕೂ ಹೆಚ್ಚು ಮಂದಿ ಸಾವು

ಆಳದ ಪ್ರಪಾತಕ್ಕೆ ಬಿದ್ದ ಖಾಸಗಿ ಬಸ್, ಶಾಲಾ ಮಕ್ಕಳು ಸೇರಿದಂತೆ 16ಕ್ಕೂ ಹೆಚ್ಚು ಮಂದಿ ಸಾವು

0 comments

ಖಾಸಗಿ ಬಸ್ಸು ಆಳದ ಪ್ರಪಾತಕ್ಕೆ ಬಿದ್ದ ಪರಿಣಾಮ ಶಾಲಾ ಮಕ್ಕಳು ಸೇರಿದಂತೆ 16ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ಇಂದು ಬೆಳಗ್ಗೆ 8:30ರ ಸುಮಾರಿಗೆ ನಡೆದಿದೆ.

ಶೈನ್‌ಶಾರ್‌ನಿಂದ ಸೈಂಜ್ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಜಂಗ್ಲಾ ಗ್ರಾಮದ ಬಳಿ ರಸ್ತೆಯಿಂದ ಆಳದ ಪ್ರಪಾತಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ಮಕ್ಕಳು ಸೇರಿದಂತೆ 16ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬಸ್‌ನಲ್ಲಿ 35- 40 ಮಂದಿ ಇದ್ದು, ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಿಂದಾಗಿ ಇಲ್ಲಿಯವರೆಗೂ ಆರು ಮೃತದೇಹಗಳು ಮತ್ತು ಮೂವರು ಗಾಯಾಳುಗಳನ್ನು ಹೊರತೆಗೆಯಲಾಗಿದೆ. ಅನೇಕ ಜನರು ಬಸ್ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದ್ದು, ಅಪಘಾತ ಸಂಭವಿಸಿದ ಸ್ಥಳವು ಅತ್ಯಂತ ಕಷ್ಟಕರ ಪ್ರದೇಶವಾಗಿದೆ. ಬಸ್ ಅತ್ಯಂತ ಆಳವಾದ ಪ್ರಪಾತಕ್ಕೆ ಬಿದ್ದಿರುವುದರಿಂದ ಬಸ್ ನಜ್ಜುಗುಜ್ಜಾಗಿದೆ.

You may also like

Leave a Comment