Home » Punjab Police Death: ಅರ್ಜುನ ಪ್ರಶಸ್ತಿ ವಿಜೇತ ಹಿರಿಯ ಪೊಲೀಸ್‌ ಅಧಿಕಾರಿಯ ಶವ ಕಾಲುವೆಯಲ್ಲಿ ಪತ್ತೆ!!

Punjab Police Death: ಅರ್ಜುನ ಪ್ರಶಸ್ತಿ ವಿಜೇತ ಹಿರಿಯ ಪೊಲೀಸ್‌ ಅಧಿಕಾರಿಯ ಶವ ಕಾಲುವೆಯಲ್ಲಿ ಪತ್ತೆ!!

1 comment

Panjab Police Death: ಅರ್ಜುನ ಪ್ರಶಸ್ತಿ ಪುರಸ್ಕೃತ ಪಂಜಾಬ್‌ ಉಪ ಪೊಲೀಸ್‌ ವರಿಷ್ಠಾಧಿಕಾರಿ (ಡಿಎಸ್‌ಪಿ) ದಲ್ಬೀರ್‌ ಸಿಂಗ್‌ ಡಿಯೋಲ್‌ ಅವರ ನಿಗೂಢವಾಗಿ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.

ಹೊಸವರ್ಷದಂದೆ ಇದೊಂದು ಶಾಕಿಂಗ್‌ ನ್ಯೂಸ್‌ ಎಂದೇ ಹೇಳಬಹುದು. ಭಾನುವಾರ ರಾತ್ರಿ ಹೊಸ ವರ್ಷಾಚರಣೆಗೆಂದು ತೆರಳಿದ್ದ ದಲ್ಬೀರ್‌ ಸಿಂಗ್‌ ಡಿಯೋಲ್‌ ಮನೆಗೆ ಹಿಂದಿರುಗದ ಕಾರಣ ಅವರ ಕುಟುಂಬದವರು ನಾಪತ್ತೆ ದೂರು ದಾಖಲು ಮಾಡಿದ್ದಾರೆ. ಆದರೆ ಇಂದು ಬೆಳಗ್ಗೆ ಜಲಂಧರ್‌ ಪಟ್ಟಣದ ಹೊರವಲಯದಲ್ಲಿರುವ ಬಸ್ತಿ ಬಾವಾ ಖೇಲ್‌ನ ಕಾಲುವೆಯ ಬಳಿ ಶವ ಪತ್ತೆಯಾಗಿದೆ. ಹಾಗೂ ದೇಹದ ಭಾಗದಲ್ಲಿ ಗಾಯದ ಗುರುತಿನ ಪತ್ತೆಯಾಗಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Belthangady: ಹೊಸವರ್ಷದ ಪಾರ್ಟಿಯಲ್ಲಿ ಕಿರಿಕ್ ! ಯುವಕನ ಮೂಗನ್ನೇ ಕಚ್ಚಿದ ಸ್ನೇಹಿತ

ಹೊಸ ವರ್ಷಾಚರಣೆಯ ಸಂದರ್ಭ ಶನಿವಾರ ತಮ್ಮ ಸ್ನೇಹಿತರ ಜೊತೆ ಹೊರಗಡೆ ಹೋಗಿದ್ದ ಡಿಎಸ್‌ಪಿ ಅವರು ವಾಪಸ್ಸಾಗದೇ ಇರುವುದರಿಂದ ಕುಟುಂಬದವರು ನಾಪತ್ತೆ ದೂರು ದಾಖಲಿಸಿದಾಗ, ಪೊಲೀಸರು ಹುಡುಕಾಟ ಆರಂಭ ಮಾಡಿದ್ದಾರೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಲಾಗಿದೆ.

ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಹಲವು ಪದಕಗಳನ್ನು ಗೆದ್ದಿದ್ದ ದಲ್ಬೀರ ಸಿಂಗ್‌ ಡಿಯೋಲ್‌ ಅವರಿಗೆ 2000 ಇಸವಿಯಲ್ಲಿ ಅರ್ಜುನ ಪ್ರಶಸ್ತಿ ಕೂಡಾ ಲಭಿಸಿತ್ತು.

You may also like

Leave a Comment