ಪುತ್ತೂರು: ಶಾಲಾ ಕಾಲೇಜುಗಳಲ್ಲಿ ಧರ್ಮದ ಆಧಾರದಲ್ಲಿ ಗಲಭೆ ಸೃಷ್ಟಿಸುವಂತೆ ಪ್ರಚೋದನಾಕಾರಿ ಹೇಳಿಕೆ ಸಂಬಂಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಇಬ್ಬರು ಮುಖಂಡರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಫ್‌ಐ ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ ಮತ್ತು ಸಿಎಫ್‌ಐ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಮತ್ತಿತರರ ವಿರುದ್ಧ ಐಪಿಸಿ ಸೆಕ್ಷನ್ 153 (ಎ) 34ಪ್ರಕರಣ ದಾಖಲಾಗಿದೆ. ಪುಷ್ಪರಾಜ್ ಆಚಾರ್ಯ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಕೋಮು ಭಾವನೆ ಕೆರಳಿಸಿ ವಿದ್ಯಾರ್ಥಿಗಳ ನಡುವೆ ಗಲಭೆ ನಡೆಸಲು ಉತ್ತೇಜನ, ಸಾಮಾಜಿಕ ಸ್ವಾಸ್ಥ್ಯ ನಾಶ ಮಾಡಿ ಧರ್ಮದ ಆಧಾರದಲ್ಲಿ ಶಾಲಾ ಕಾಲೇಜು ಗಳಲ್ಲಿ ಗಲಭೆ ನಡೆಸಲು ಪ್ರಚೋದನೆ ನಡೆಸುವಂತೆ ಭಾಷಣ ಮಾಡಿರುವುದು ಅಲ್ಲದೆ ಹಿಂದು ಮುಖಂಡರ ವಿರುದ್ಧ ಕೀಳು ಮಟ್ಟದ ಶಬ್ದಗಳಲ್ಲಿ ಮಾತನಾಡಿರುವುದು ಹಾಗೂ ಕಾಲೇಜಿನ ಒಳಗಡೆ ಅಕ್ರಮ ಪ್ರವೇಶ ಮಾಡಿ ಅಲ್ಲಿನ ವಿಧ್ಯಾರ್ಥಿಗಳ ನಡುವೆ ಗಲಭೆ ನಡೆಸಲು ಹುನ್ನಾರ ನಡೆಸಿರುತ್ತಾರೆ ಎಂಬ ಆರೋಪದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
