Home » ಪುತ್ತೂರು: ಖಾಸಗಿ ಬಸ್‌ನಲ್ಲಿ ಮಾದಕ ವಸ್ತು ಸಾಗಾಟ ,ಇಬ್ಬರ ಬಂಧನ

ಪುತ್ತೂರು: ಖಾಸಗಿ ಬಸ್‌ನಲ್ಲಿ ಮಾದಕ ವಸ್ತು ಸಾಗಾಟ ,ಇಬ್ಬರ ಬಂಧನ

by Mallika
0 comments

ಪುತ್ತೂರು: ಬೆಂಗಳೂರು -ಮಂಗಳೂರು ಖಾಸಗಿ ಬಸ್ ನಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪದ‌ ಮೇರೆಗೆ ಇಬ್ಬರು ಆರೋಪಿಗಳನ್ನು ಪುತ್ತೂರು ಪೊಲೀಸರು ಆ.18 ರಂದು ಬೆಳಿಗ್ಗೆ ಪುತ್ತೂರಿನ ಮುರದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಿಂದ ಪುತ್ತೂರಿಗೆ ಬಂದು ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ನಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿರುವ ಕುರಿತ ಖಚಿತ ಮಾಹಿತಿಯಂತೆ ಪೊಲೀಸರು ಬಸ್ ತಡೆದು ಪರಿಶೀಲಿಸಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರು ಆರೋಪಿಗಳಲ್ಲಿ ಮಾದಕ ವಸ್ತು ಇರುವುದು ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

You may also like