Home » ಪುತ್ತೂರು : ಶಾಲಾ ಬಳಿ ಮೂರು ದ್ವಿಚಕ್ರ ವಾಹನಗಳ ನಡುವೆ ಅಪಘಾತ | ಓರ್ವನಿಗೆ ಗಂಭೀರ ಗಾಯ

ಪುತ್ತೂರು : ಶಾಲಾ ಬಳಿ ಮೂರು ದ್ವಿಚಕ್ರ ವಾಹನಗಳ ನಡುವೆ ಅಪಘಾತ | ಓರ್ವನಿಗೆ ಗಂಭೀರ ಗಾಯ

by Praveen Chennavara
0 comments

ಪುತ್ತೂರು: ನರಿಮೊಗರು ಶಾಲಾ ಬಳಿ ಮೂರು ಸ್ಕೂಟರ್‌ಗಳ ಬೆಳ್ಳಂಬೆಳಗೆ ನಡೆದಿದೆ.

ಪುತ್ತೂರು ಕಡೆಗೆ ಬರುತ್ತಿದ್ದ ಸ್ಕೂಟರ್ ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎರಡು ಸ್ಕೂಟರ್‌ಗಳಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರರೊಬ್ಬರು ತೀವ್ರ ಗಾಯಗೊಂಡಿದ್ದು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಉಳಿದಂತೆ ಇನ್ನೊಂದು ಸ್ಕೂಟರ್‌ನ ಸವಾರ ನರಿಮೊಗರು ದೇವಸ್ಥಾನದ ಗುಮಾಸ್ತ ವಿಜಿತ್ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.

You may also like

Leave a Comment