Home » CWG : ಭಾರತದ ಸ್ವರ್ಣಪದಕ ಬೇಟೆ ಮುಂದುವರಿಕೆ, ಪಿ ವಿ ಸಿಂಧು ಮುಡಿಗೇರಿದ ಚಿನ್ನದ ಗರಿ!!!

CWG : ಭಾರತದ ಸ್ವರ್ಣಪದಕ ಬೇಟೆ ಮುಂದುವರಿಕೆ, ಪಿ ವಿ ಸಿಂಧು ಮುಡಿಗೇರಿದ ಚಿನ್ನದ ಗರಿ!!!

by Mallika
0 comments

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುವ ಕಾಮನ್ ವೆಲ್ತ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ದೊರಕಿದೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಪಿ.ವಿ ಸಿಂಧು ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಗೇಮ್‌ಗಳಿಂದ ಗೆಲ್ಲುವ ಮೂಲಕ ಸ್ವರ್ಣ ಪದಕ ಜಯಿಸಿದ್ದಾರೆ.

ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ ಸಿಂಧು ಸ್ವರ್ಣ ಪದಕ ಜಯಿಸುವ ಮೂಲಕ ಭಾರತಕ್ಕೆ ಚಿನ್ನದ ಗೆರಿ ತಂದಿದ್ದಾರೆ. ಈ ಮೂಲಕ ಭಾರತವು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 19ನೇ ಚಿನ್ನದ ಪದಕ ಗೆದ್ದಿದೆ.

You may also like

Leave a Comment