Home » RailOne: ರೈಲ್ವೆ ಇಲಾಖೆಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಈ ಆಪ್ ನಲ್ಲಿ ಟಿಕೆಟ್ ಬುಕ್ ಮಾಡಿದ್ರೆ 6 ತಿಂಗಳು 3% ರಿಯಾಯಿತಿ

RailOne: ರೈಲ್ವೆ ಇಲಾಖೆಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಈ ಆಪ್ ನಲ್ಲಿ ಟಿಕೆಟ್ ಬುಕ್ ಮಾಡಿದ್ರೆ 6 ತಿಂಗಳು 3% ರಿಯಾಯಿತಿ

0 comments

RailOne: ಕೆಲವು ದಿನಗಳ ಹಿಂದಷ್ಟೇ ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ಟಿಕೆಟ್ ದರವನ್ನು ಹೆಚ್ಚಿಸಿ ಆದೇಶವನ್ನು ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಇಲಾಖೆಯು ಟಿಕೆಟ್ ಬುಕ್ ಮಾಡುವವರಿಗೆ 3% ರಿಯಾಯಿತಿಯನ್ನು ಘೋಷಿಸಿದೆ.

ಹೌದು, ರೈಲ್ವೆ ಇಲಾಖೆಯು ಇದೀಗ ಟಿಕೆಟ್ ಬುಕ್ಕಿಂಗ್‌ನಲ್ಲಿ ರಿಯಾಯಿತಿ ಘೋಷಿಸುವ ಮೂಲಕ ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದೆ. ಜನವರಿ 14ರಿಂದ ಟಿಕೆಟ್ ಬುಕ್ಕಿಂಗ್ ರಿಯಾಯಿತಿ ಜಾರಿ ಮಾಡುವುದಾಗಿ ತಿಳಿಸಿದೆ. ಹಾಗಂತ ಇದು ಯಾವ ಯಾವುದೋ ಆಪ್ ಮುಖಾಂತರ ಖರೀದಿಸಿದರೆ ಅಲ್ಲ. ರೈಲ್‌ ಒನ್‌ ಆಯಪ್‌ ಬಳಸಿ ಟಿಕೆಟ್‌ ಕೊಂಡರೆ ಶೇ.3ರಷ್ಟು ರಿಯಾಯಿತಿ ಕೊಡುವುದಾಗಿ ಘೋಷಣೆ ಮಾಡಿದೆ. ಇದು ಜ.14ರಿಂದ ಜು.14ರವರೆಗೆ ಜಾರಿಯಲ್ಲಿದೆ ಎಂದು ರೈಲ್ವೆ ತಿಳಿಸಿದೆ.

“ಶೇಕಡಾ 3 ರಷ್ಟು ರಿಯಾಯಿತಿಯ ಪ್ರಸ್ತಾವನೆಯು ಜನವರಿ 14 ರಿಂದ ಜುಲೈ 14 ರವರೆಗೆ ಜಾರಿಯಲ್ಲಿರುತ್ತದೆ. ಹೆಚ್ಚಿನ ಪರಿಶೀಲನೆಗಾಗಿ CRIS ಮೇ ತಿಂಗಳಲ್ಲಿ ಈ ಪ್ರಸ್ತಾವನೆಯ ಪ್ರತಿಕ್ರಿಯೆಯನ್ನು ಸಲ್ಲಿಸುತ್ತದೆ” ಎಂದು ಅದು ಹೇಳಿದೆ.ರೈಲ್‌ಒನ್ ಅಪ್ಲಿಕೇಶನ್‌ನಲ್ಲಿ ಆರ್-ವ್ಯಾಲೆಟ್ ಮೂಲಕ ಬುಕಿಂಗ್‌ಗಳಿಗೆ ಈಗಿರುವ ಶೇಕಡಾ 3 ರಷ್ಟು ಕ್ಯಾಶ್‌ಬ್ಯಾಕ್ ಮುಂದುವರಿಯುತ್ತದೆ. ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲಿ, ರೈಲ್‌ಒನ್ ಅಪ್ಲಿಕೇಶನ್‌ನಲ್ಲಿ ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸಿ ಆರ್-ವ್ಯಾಲೆಟ್ ಮೂಲಕ ಪಾವತಿ ಮಾಡುವ ಸಂಭಾವ್ಯ ಪ್ರಯಾಣಿಕರಿಗೆ ಶೇಕಡಾ 3 ರಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಆದರೆ, ಹೊಸ ಕೊಡುಗೆಯಲ್ಲಿ, ಎಲ್ಲಾ ಡಿಜಿಟಲ್ ಪಾವತಿ ವಿಧಾನದ ಮೂಲಕ ರೈಲ್‌ಒನ್‌ನಲ್ಲಿ ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸುವವರಿಗೆ ಶೇಕಡಾ 3 ರಷ್ಟು ರಿಯಾಯಿತಿ ನೀಡಲಾಗುತ್ತದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

You may also like