Train Ticket : ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆಯು ಟಿಕೆಟ್ ದರದ ಬಿಸಿ ಮುಟ್ಟಿಸಿದೆ. ಯಸ್, ಇಲಾಖೆಯು ರೈಲಿನ ಟಿಕೆಟ್ ದರವನ್ನು ಏರಿಸಲು ನಿರ್ಧಾರ ಮಾಡಿದೆ.
ಹೌದು, ರೈಲ್ವೆಯು ಡಿಸೆಂಬರ್ 26, 2025 ರಿಂದ ಜಾರಿಗೆ ಬರುವಂತೆ ಹೊಸ ದರ ರಚನೆಯನ್ನು ಘೋಷಿಸಿದೆ. ಹೀಗಾಗಿ ಡಿಸೆಂಬರ್ 26 ರಿಂದ ರೈಲ್ವೇ ಪ್ರಯಾಣ ದರ ಏರಿಕೆಯನ್ನು ಜಾರಿಗೆ ತರುವುದರಿಂದ ರೈಲು ಪ್ರಯಾಣ ದುಬಾರಿಯಾಗಲಿದೆ.
ಸಾಮಾನ್ಯ ವರ್ಗದಲ್ಲಿ 215 ಕಿಲೋಮೀಟರ್‌ಗಳೊಳಗಿನ ಪ್ರಯಾಣಕ್ಕೆ ಯಾವುದೇ ದರವನ್ನು ಹೆಚ್ಚಿಸುವುದಿಲ್ಲ. 215 ಕಿಮೀ ಮೀರಿದ ಪ್ರಯಾಣಕ್ಕೆ, ಸಾಮಾನ್ಯ ವರ್ಗದಲ್ಲಿ ಪ್ರತಿ ಕಿಮೀಗೆ 1 ಪೈಸೆ ಮತ್ತು ಮೇಲ್/ಎಕ್ಸ್‌ಪ್ರೆಸ್ ನಾನ್-ಎಸಿ ಮತ್ತು ಎಸಿ ತರಗತಿಗಳಿಗೆ ಪ್ರತಿ ಕಿಮೀಗೆ 2 ಪೈಸೆ ದರ ಏರಿಕೆಯಾಗಲಿದೆ. ಈ ಬದಲಾವಣೆಯಿಂದ ನಿರೀಕ್ಷಿತ ಆದಾಯ ಗಳಿಕೆ 600 ಕೋಟಿ ರೂಪಾಯಿಗಳು ಮತ್ತು 500 ಕಿಮೀ ನಾನ್-ಎಸಿ ಪ್ರಯಾಣದಲ್ಲಿ ಪ್ರಯಾಣಿಕರು ಹೆಚ್ಚುವರಿ 10 ರೂ ಹೆಚ್ಚಾಗಲಿದೆ.
