Home » ರಾಜ್ ಠಾಕ್ರೆಯಿಂದ ಸರಕಾರಕ್ಕೆ ಸವಾಲ್ ! ಮಸೀದಿಯಲ್ಲಿ ಲೌಡ್ ಸ್ಪೀಕರ್ ತೆಗೆಸಿರಿ….ಇಲ್ಲದಿದ್ದರೆ…

ರಾಜ್ ಠಾಕ್ರೆಯಿಂದ ಸರಕಾರಕ್ಕೆ ಸವಾಲ್ ! ಮಸೀದಿಯಲ್ಲಿ ಲೌಡ್ ಸ್ಪೀಕರ್ ತೆಗೆಸಿರಿ….ಇಲ್ಲದಿದ್ದರೆ…

by Mallika
0 comments

ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಅಲ್ಲಿನ ಸರಕಾರಕ್ಕೆ ಸವಾಲೊಂದನ್ನು ಹಾಕಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಮುಖಂಡ ರಾಜ್ ಠಾಕ್ರೆ, ಮುಂಬೈನ ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸುವ ನಿರ್ಧಾರ ತೆಗೆದುಕೊಳ್ಳುವಂತೆ ಅಲ್ಲಿನ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಪ್ರಾರ್ಥನೆಗೆ ನಾನು ವಿರೋಧಿಯಲ್ಲ. ಆದರೆ ಮಸೀದಿಯಲ್ಲಿ ಲೌಡ್ ಸ್ಪೀಕರ್ ಹಾಕಬಾರದು ಅಷ್ಟೇ. ಒಂದು ವೇಳೆ ಸರ್ಕಾರ ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸದಿದ್ದರೆ ತಾವು ಮಸೀದಿ ಮುಂದೆ ಲೌಡ್ ಸ್ಪೀಕರ್ ಹಾಕಿ ಹನುಮಾನ್ ಚಾಲೀಸ ಬಿತ್ತರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

You may also like

Leave a Comment