Home » Video Viral: ದರ್ಗಾಗಳಲ್ಲಿ ರಾಮ ನಾಮ ಜಪಿಸಿ, ದೀಪ ಬೆಳಗಿಸಿ- ಮೌಲ್ವಿಯ ವೀಡಿಯೋ ವೈರಲ್‌!!!

Video Viral: ದರ್ಗಾಗಳಲ್ಲಿ ರಾಮ ನಾಮ ಜಪಿಸಿ, ದೀಪ ಬೆಳಗಿಸಿ- ಮೌಲ್ವಿಯ ವೀಡಿಯೋ ವೈರಲ್‌!!!

0 comments

 Ram Mandir: ಅಯೋಧ್ಯೆಯ ರಾಮಮಂದಿರದ(Ram Mandir)ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಶುಭ ಮುಹೂರ್ತದಲ್ಲಿ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ (Ram Lalla Idol)ಪ್ರತಿಷ್ಠಾಪನೆ ನಡೆಯಲಿದೆ.

ದೇಶಾದ್ಯಂತ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಜನರು ಎದುರು ನೋಡುತ್ತಿದ್ದಾರೆ. ಈ ನಡುವೆ, ರಾಮ ಮಂದಿರ ಉದ್ಘಾಟನೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಈ ನಡುವೆ ಮುಸ್ಲಿಂ ಮೌಲ್ವಿಯೊಬ್ಬರು ರಾಮಮಂದಿರ ಪ್ರಾಣಪ್ರತಿಷ್ಠಾಪನೆ ದಿನ ಮಸೀದಿ, ದರ್ಗಗಳಲ್ಲಿ ರಾಮನಾಮ ಜಪಿಸಿ ದೀಪ ಬೆಳಗಿಸಿ ಎಂದು ಸಾಮರಸ್ಯದ ಸಂದೇಶ ನೀಡಿರುವ ವಿಡಿಯೋ ವೈರಲ್ ಆಗಿದೆ.

https://x.com/Senapatibhakt/status/1748382515327557637?s=20

ವೈರಲ್ ಆಗಿರುವ ವಿಡಿಯೋದಲ್ಲಿ ಮೌಲ್ವಿ, ಮಾತನಾಡಿದ್ದು, ನನ್ನ ಎಲ್ಲಾ ಮುಸಲ್ಮಾನ ಭಾಂಧವರಿಗೆ ನಾನು ವಿನಂತಿ ಮಾಡಲು ಬಯಸುವುದೇನೆಂದರೆ ಜನವರಿ 22 ರಂದು ಶ್ರೀರಾಮ, ಜಯರಾಮ ಜಪಿಸಿ, ಮುಸ್ಲಿಂರು ತಮ್ಮ ಮನೆಗಳು,ಮಸೀದಿಗಳು ಹಾಗೂ ದರ್ಗಾಗಳಲ್ಲಿ ದೀಪ ಬೆಳಗಿಸಿ ಎಂದು ಸಾಮರಸ್ಯದ ಸಂದೇಶವನ್ನು ಸಾರಿದ್ದಾರೆ.

You may also like

Leave a Comment