Home » Rama Mandir: ಮುಂದುವರಿದ ರಾಮನನ್ನು ಅಪಮಾನಿಸುವ ವೀಡಿಯೋ! ಮುಸ್ಲಿಂ ಯುವಕನ ಮೇಲೆ ಕೇಸ್‌!

Rama Mandir: ಮುಂದುವರಿದ ರಾಮನನ್ನು ಅಪಮಾನಿಸುವ ವೀಡಿಯೋ! ಮುಸ್ಲಿಂ ಯುವಕನ ಮೇಲೆ ಕೇಸ್‌!

0 comments

Rama Janmabhumi: ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಗೊಂಡ ಬೆನ್ನಿಗೇ ಹಲವು ಮಂದಿ ರಾಮನನ್ನು ಅಪಮಾನಿಸುವ ಹೇಳಿಕೆಗಳನ್ನು ಫೋಟೋ, ವೀಡಿಯೋಗಳನ್ನು ಹಾಕುವುದು ಹೆಚ್ಚಾಗಿದೆ.
ಹಾವೇರಿ ಜಿಲ್ಲೆಯ ಸವಣೂರಿನ ಯುವಕನೊಬ್ಬ ಶ್ರೀರಾಮನ ಕುರಿತು ಅವಹೇಳನ ಮಾಡುವ whats app ಹಾಕಿಕೊಂಡಿರುವ ಕುರಿತು ವರದಿಯಾಗಿದೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತಗ್ಗಿಹಳ್ಳಿ ಗ್ರಾಮದ ಕಲಂದರ ಕಣವಿ ಎಂಬಾತನೇ ಈ ಸ್ಟೇಟಸ್‌ನಲ್ಲಿ ವೀಡಿಯೋ ಹಾಕಿ ಸವಾಲು ಹಾಕಿದವನು.

ಈ ವೀಡಿಯೋದಲ್ಲಿ ರಾಮನ ಮಂದಿರವನ್ನು ತೋರಿಸಲಾಗಿದ್ದು, ನೀವು ಇಷ್ಟು ದೊಡ್ಡ ಮಂದಿರ ಕಟ್ಟಿರಬಹುದು. ನಾವು ಅದಕ್ಕಿಂತಲೂ ದೊಡ್ಡದಾದ ಮಸೀದಿಯನ್ನು ಕಟ್ಟುತ್ತೇವೆ. ಏಷ್ಯಾದಲ್ಲೇ ದೊಡ್ಡ ಮಸೀದಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾನೆ.

ಪಾಕಿಸ್ತಾನದ ರಾಷ್ಟ್ರಧ್ವಜದ ಚಿತ್ರವಿಟ್ಟು, ಹಮ್‌ ಬಾಪ್‌ ಹೈ ತುಮಾರೆ ಎಂದು ಸ್ಟೇಟಸ್‌ ಹಾಕಿದ್ದಾನೆ ಈ ಯುವಕ.

ಈತನ ವಿರುದ್ಧ ಮಹೇಶ್‌ ಎಸ್‌ ಕೇಲೂರು ಅವರು ದೂರು ನೀಡಿದ್ದಾರೆ. ವಕ್ಫ್‌ ಮಂಡಳಿ ನಿರ್ಮಾಣ ಮಾಡಲು ಮಸೀದಿಯ ನೀಲನಕಾಶೆಯನ್ನು ಕೂಡಾ ಹಾಕಿದ್ದಾನೆ. ಈತನ ವಿರುದ್ಧ ಸವಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment