Ration Card Holder: ಬಿಪಿಎಲ್, ಎಪಿಎಲ್ ಸೇರಿ ಪಡಿತರ ಚೀಟಿದಾರರಿಗೆ (Ration Card Holder)ಮತ್ತೊಂದು ಗುಡ್ ನ್ಯೂಸ್!!ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಮತ್ತೊಮ್ಮೆ ಅನುವು ಮಾಡಿಕೊಡಲಾಗಿದೆ. ಪಡಿತರ ಚೀಟಿಯಲ್ಲಿನ(Ration Card)ಫಲಾನುಭವಿಗಳ ಮಾಹಿತಿ ತಿದ್ದುಪಡಿ ಮತ್ತು ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರಿಸಲು ಆಹಾರ ಇಲಾಖೆ ಮತ್ತೊಮ್ಮೆ ಅನುವು ಮಾಡಿಕೊಟ್ಟಿದೆ. ಈಗಾಗಲೇ ಪಡಿತರ ಚೀಟಿಯಲ್ಲಿ ನಿಮ್ಮ ಹೆಸರು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿ, ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಸೇರ್ಪಡೆ (Ration Card Name Update)ಆಗಿದೆಯೇ ಎಂಬುದನ್ನು ಹೀಗೆ ಚೆಕ್ ಮಾಡಿಕೊಳ್ಳಿ.
ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಸೇರ್ಪಡೆ ಆಗಿದೆಯೇ ಎಂಬುದನ್ನು ಹೀಗೆ ಚೆಕ್ ಮಾಡಿ:
* ಮೊದಲಿಗೆ ನೀವು ಅಧಿಕೃತ ವೆಬ್ ಸೈಟ್ nfsa.gov.in/Default.aspx ಗೆ ಭೇಟಿ ನೀಡಿ.
* ಆ ಬಳಿಕ, ನೀವು ಪಡಿತರ ಚೀಟಿಯ ಆಯ್ಕೆಯನ್ನು ಆಯ್ದುಕೊಳ್ಳಬೇಕು.
* ‘ರಾಜ್ಯ ಪೋರ್ಟಲ್ಗಳಲ್ಲಿ ಪಡಿತರ ಚೀಟಿ ವಿವರಗಳು’ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.
* ನಂತರ ನಿಮ್ಮ ಪಡಿತರ ಚೀಟಿ ಇರುವ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ.
* ಆ ಬಳಿಕ, ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಬ್ಲಾಕ್ ಅನ್ನು ಆಯ್ಕೆ ಮಾಡಿ, ನಿಮ್ಮ ಪಂಚಾಯತ್ ಅನ್ನು ಕೂಡ ಆಯ್ಕೆ ಮಾಡಿ.
* ನಿಮ್ಮ ಪಡಿತರ ಅಂಗಡಿಯ ಹೆಸರು ಮತ್ತು ಪಡಿತರ ಚೀಟಿಯ ಪ್ರಕಾರವನ್ನು ಆಯ್ಕೆ ಮಾಡಿದರೆ, ಒಂದು ಪಟ್ಟಿ ನಿಮ್ಮ ಮುಂದೆ ಕಂಡುಬರುತ್ತದೆ.
* ಈ ಪಟ್ಟಿಯಲ್ಲಿ ಪಡಿತರ ಚೀಟಿದಾರರ ಹೆಸರುಗಳಿದ್ದು,ಇಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ಹುಡುಕಬೇಕು.
*. ನೀವು ಹುಡುಕಿದ ಹೆಸರು ಪಟ್ಟಿಯಲ್ಲಿ ಇದ್ದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ ಎಂಬುದು ತಿಳಿಯುತ್ತದೆ.
* ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಯಾಗದಿದ್ದರೆ ಮತ್ತೊಮ್ಮೆ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಇದನ್ನೂ ಓದಿ: Kitchen Hacks:ಅಡುಗೆ ಮನೆಯ ಸಿಂಕ್ ತುಂಬಾ ಗಲೀಜುಂಟಾ ?! ಈ ಟ್ರಿಕ್ಸ್ ಬಳಸಿ ಒಂದೇ ನಿಮಿಷದಲ್ಲಿ ಸ್ವಚ್ಚಗೊಳಿಸಿ
