ಮನೆಯಲ್ಲಿ ಮಗು ಜನಿಸಿದರೆ ಆ ಹೊಸ ಸದಸ್ಯನ ಹೆಸರನ್ನು ಪಡಿತರಕ್ಕೆ ಹೇಗೆ ಸೇರಿಸುವುದು ಇದರ ಬಗ್ಗೆ ಇಲ್ಲಿ ತಿಳಿಸಿಕೊಡುತ್ತೇವೆ. ಇದಕ್ಕಾಗಿ ಜನರು ಆಗಾಗ್ಗೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುತ್ತಾರೆ. ಇದರಲ್ಲಿ ಸಾಕಷ್ಟು ತೊಂದರೆ ಇದೆ. ಏಕೆಂದರೆ ನೀವು ಮನೆಯಿಂದ ಹೊರಹೋಗಬೇಕು ಮತ್ತು ನಿಮ್ಮ ಕೆಲಸವು ಆಗುತ್ತದೆಯೇ ಅಥವಾ ಇಲ್ಲವೇ ಎಂದು ಸಹ ತಿಳಿದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಆನ್ನೈನಲ್ಲಿ ಪಡಿತರ ಚೀಟಿಗೆ ಕುಟುಂಬದ ಸದಸ್ಯರ ಹೆಸರನ್ನು ಕೂಡ ಸೇರಿಸಬಹುದು. ಇಲ್ಲಿ ನಾವು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ.
ರೇಷನ್ ಕಾರ್ಡ್ ಅಪ್ಡೇಟ್ ಮಾಡಲು ಈ ದಾಖಲೆಗಳು ಬೇಕು:
ಪಡಿತರ ಚೀಟಿಗೆ ಕುಟುಂಬದ ಮಕ್ಕಳ ಹೆಸರು ಸೇರ್ಪಡೆಯಾಗಬೇಕಾದರೆ ಕುಟುಂಬದ ಮುಖ್ಯಸ್ಥರು ಪಡಿತರ ಚೀಟಿ ಹೊಂದಿರುವುದು ಕಡ್ಡಾಯ. ಕುಟುಂಬದ ಮುಖ್ಯಸ್ಥರಿಗೆ ಮೂಲ ಕಾರ್ಡೊಂದಿಗೆ ಫೋಟೋ ನಕಲು ಅಗತ್ಯವಿದೆ. ಅಲ್ಲದೆ ಮಕ್ಕಳ ಜನ್ಮ ಪ್ರಮಾಣಪತ್ರ ಮತ್ತು ಅವರ ಪೋಷಕರ ಆಧಾರ್ ಕಾರ್ಡ್ ಬೇಕು. ಗ್ರಾಹಕರು ಪಡಿತರ ಚೀಟಿಯಲ್ಲಿ ಹೊಸದಾಗಿ ಮದುವೆಯಾದ ಮಹಿಳೆಯ ಹೆಸರನ್ನು ಸೇರಿಸಲು ಬಯಸಿದರೆ ಅವರ ಆಧಾರ್ ಕಾರ್ಡ್, ವಿವಾಹ ಪ್ರಮಾಣಪತ್ರ ಮತ್ತು ಆಕೆಯ ಪೋಷಕರ ಪಡಿತರ ಚೀಟಿ ಕಡ್ಡಾಯವಾಗಿದೆ.
ಆನ್ನೈನ್ನಲ್ಲಿ ಪಡಿತರ ಚೀಟಿಯಲ್ಲಿ ಹೆಸರು ಸೇರಿಸುವುದು ಹೇಗೆ:
ಮೊದಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ (ahara.kar.nic.in) ಗೆ ಭೇಟಿ ನೀಡಿ
ನಂತರ ಇ-ಸೇವೆಗಳ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ‘ಹೊಸ ಪಡಿತರ ಚೀಟಿ’ ಆಯ್ಕೆಮಾಡಿ
ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ ಮುಂದೆ ‘ಹೊಸ ಪಡಿತರ ಚೀಟಿ ವಿನಂತಿ’ ಮೇಲೆ ಕ್ಲಿಕ್ ಮಾಡಿ
ಪಡಿತರ ಚೀಟಿಯ ಪ್ರಕಾರವನ್ನು ಆಯ್ಕೆಮಾಡಿ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ‘ಹೋಗಿ’ ಕ್ಲಿಕ್ ಮಾಡಿ
ಯಶಸ್ವಿ ಪರಿಶೀಲನೆಯಲ್ಲಿ OTP ಅಥವಾ ಫಿಂಗರ್ ಪ್ರಿಂಟ್ ಪರಿಶೀಲನೆಯೊಂದಿಗೆ ದೃಢೀಕರಿಸಿ
OTP ಆಯ್ಕೆ ಮಾಡಿದ ನಂತರ ಇಲಾಖೆಯಿಂದ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಕಳುಹಿಸಲಾಗುತ್ತದೆ
OTP ನಮೂದಿಸಿ ಮತ್ತು ‘ಹೋಗಿ’ ಕ್ಲಿಕ್ ಮಾಡಿ ಯಶಸ್ವಿ ಪರಿಶೀಲನೆಯ ನಂತರ ಆಧಾರ್ ವಿವರಗಳನ್ನು ಸ್ಕ್ರೀನ್ ಮೇಲೆ ನೋಡಿ
‘ಸೇರಿಸು’ ಬಟನ್ ಮೇಲೆ ಕ್ಲಿಕ್ ಮಾಡಿ ಇದರಿಂದ ಅರ್ಜಿಯನ್ನು ಸ್ವೀಕರಿಸಿ ಅಪ್ಲಿಕೇಶನ್ ಸಂಖ್ಯೆಯನ್ನು ರಚಿಸಲಾಗುತ್ತದೆ.
ಮುಂದೆ ಕೇಳಲಾದ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
ಆನ್ನೈನ್ನಲ್ಲಿ ಪಡಿತರ ಚೀಟಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?
ಮೇಲಿನಂತೆ ಅದೇ ಅಧಿಕೃತ ವೆಬ್ಸೈಟ್ (ahara.kar.nic.in) ಗೆ ಭೇಟಿ ನೀಡಿ
ಹೊಸ/ಡಿಫೆಂಡಿಂಗ್ ಪಡಿತರ ಚೀಟಿಯ ಸ್ಥಿತಿ’ ಆಯ್ಕೆಮಾಡಿ ಸೂಕ್ತವಾದ ವಿಭಾಗದ ಮೇಲೆ ಕ್ಲಿಕ್ ಮಾಡಿ
ಪಡಿತರ ಚೀಟಿಯ ಸ್ಥಿತಿ’ ಆಯ್ಕೆಮಾಡಿ ಪರಿಶೀಲನೆ ಪ್ರಕಾರ ಆಯ್ಕೆಮಾಡಿ
ಆರ್ಸಿ ಸಂಖ್ಯೆಯನ್ನು ನಮೂದಿಸಿ ಮತ್ತು ‘ಹೋಗಿ’ ಕ್ಲಿಕ್ ಮಾಡಿದಾಗ ಸ್ಟೇಟಸ್ ಸ್ಕ್ರೀನ್ ಮೇಲೆ ತೋರಿಸುತ್ತದೆ.
