Home » New Ration Card: ಹೊಸ ಪಡಿತರ ಚೀಟಿ ಮಂಜೂರು ಮಾಡಬೇಡಿ: ಸರ್ಕಾರದ ಆದೇಶ, ತಕ್ಷಣದಿಂದ ಜಾರಿ

New Ration Card: ಹೊಸ ಪಡಿತರ ಚೀಟಿ ಮಂಜೂರು ಮಾಡಬೇಡಿ: ಸರ್ಕಾರದ ಆದೇಶ, ತಕ್ಷಣದಿಂದ ಜಾರಿ

0 comments
New Ration Card

New Ration Card: ಪ್ರಸ್ತುತ ಹೊಸ ಕಾರ್ಡ್​ಗೆ ಅರ್ಜಿ ​ ಹಾಕಲು ಸಿದ್ದರಾದವರಿಗೆ ಸರ್ಕಾರ ಶಾಕ್​ ನೀಡಿದೆ. ಮುಂದಿನ ಆದೇಶದವರೆಗೂ ಹೊಸ ಕಾರ್ಡ್(New Ration Card)ಅಪ್ಲಿಕೇಶನ್​ಗೆ ಅವಕಾಶವಿಲ್ಲ ಎನ್ನಲಾಗಿದೆ.

ಈಗಾಗಲೇ ಆಹಾರ ಇಲಾಖೆ ಸಚಿವ ಕೆಎಚ್​ ಮುನಿಯಪ್ಪ(KH Muniyappa) ಶೀಘ್ರದಲ್ಲೇ ಹೊಸ ರೇಷನ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಹೇಳಿದ ಮಾತನ್ನು ಮತ್ತೇ ತಿರುಗಿಸಿದ್ದಾರೆ.

ಹೌದು, ಇದೀಗ ಸರ್ಕಾರದ ಮುಂದಿನ ಆದೇಶದವರೆಗೂ ಯಾವುದೇ ಹೊಸ ಪಡಿತರ ಚೀಟಿಗಳನ್ನ ಮಂಜೂರು ಮಾಡದಂತೆ ಆದೇಶಿಸಲಾಗಿದ್ದು, ಪಡಿತರ ಚೀಟಿಯಲ್ಲಿನ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳನ್ನ ಸೇರ್ಪಡಿಸಲು ಮಾತ್ರ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.

ಆಗಸ್ಟ್​ 7ರಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವ ಕೆಎಚ್​ ಮುನಿಯಪ್ಪ ಅವರು ‘ಶೀಘ್ರದಲ್ಲೇ ಕರ್ನಾಟಕದಲ್ಲಿ ಬಿಪಿಎಲ್ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಹೇಳಿದ್ದರು. ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದಗಿನಿಂದ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸ್ವೀಕರಿಸುವುದನ್ನು ಆಹಾರ ಇಲಾಖೆ ಸ್ಥಗಿತಗೊಳಿಸಿತ್ತು. ಇದಾದ ಬಳಿಕ ಸದ್ಯದಲ್ಲೇ ಹೊಸದಾಗಿ ಬಿಪಿಎಲ್ ಕಾರ್ಡ್​ಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ಮಾಡಲಾಗುತ್ತದೆ ಎಂದಿದ್ದರು. ಇದೀಗ ಸಚಿವರು, ಸಧ್ಯ ಹೊಸ ರೇಷನ್​ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಇನ್ನು ಅನ್ನಭಾಗ್ಯ ಯೋಜನೆ ಅಡಿ ಈವರೆಗೆ ಒಂದು ಕೋಟಿ ಕುಟುಂಬಕ್ಕೆ ಇಲಾಖೆಯಿಂದ ಸುಮಾರು 556 ಕೋಟಿ ಹಣ ಹಾಕಲಾಗಿದೆ. ಆದ್ದರಿಂದ ರಾಗಿ, ಜೋಳಕ್ಕೆ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆಂದು ಬೆಂಗಳೂರಿನಲ್ಲಿ ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ ತಿಳಿಸಿದ್ದರು.

ಜೊತೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ನೀಡಲು ಮುಂದಾಗಿದ್ದು, 34 ರೂಪಾಯಿ ದರದಲ್ಲಿ ನೀಡಿದರೆ, ಅಕ್ಕಿ ಖರೀದಿ ಮಾಡಲು ಸಿದ್ಧವಿದ್ದೇವೆ. ಈ ಕುರಿತಾಗಿ ಆಹಾರ ನಿಗಮದ ದರದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡುತ್ತೇವೆ. ಜೊತೆಗೆ ಒಂದು ವಾರದಲ್ಲಿ ಅಲ್ಲಿನ ಅಧಿಕಾರಿಗಳು ನಿರ್ಧಾರ ಪ್ರಕಟಿಸುವ ವಿಶ್ವಾಸವಿದ್ದು, ಸೆಪ್ಟೆಂಬರ್​ ತಿಂಗಳಿನಲ್ಲಿ 10 ಕೆಜಿ ಅಕ್ಕಿ ವಿತರಿಸುವ ಚಿಂತನೆ ಇದೆ ಎನ್ನುವ ಭರವಸೆಯ ನೀಡಿದ್ದಾರೆ.

ಇದನ್ನೂ ಓದಿ: Morning Vastu tips: ನೀವು ಬೆಳಗ್ಗೆ ಎದ್ದ ಕೂಡಲೇ ಈ ಕೆಲಸ ಮಾಡಬೇಡಿ … ಮಾಡಿದರೆ…ಈ ಅನಾಹುತ ಖಂಡಿತ

You may also like