Home » Ration Card Update: ಉಚಿತ ಪಡಿತರ ಪಡೆಯುವವರಿಗೊಂದು ಶಾಕಿಂಗ್‌ ನ್ಯೂಸ್‌

Ration Card Update: ಉಚಿತ ಪಡಿತರ ಪಡೆಯುವವರಿಗೊಂದು ಶಾಕಿಂಗ್‌ ನ್ಯೂಸ್‌

by Mallika
0 comments

ಪಡಿತರ ಚೀಟಿ ಮೂಲಕ ಸರ್ಕಾರದ ಉಚಿತ ಪಡಿತರ ಯೋಜನೆಯ ಸದುಪಯೋಗವನ್ನು ಪಡೆಯುವವರಿಗೆ ಇಲ್ಲಿದೆ ಒಂದು ಸುದ್ದಿ. ಪಡಿತರ ವಿತರಣೆಗೆ ಸಂಬಂಧಿಸಿದ ಹೊಸ ಮಾಹಿತಿಯೊಂದು ಪ್ರಕಟಗೊಂಡಿದೆ. ಈ ಅಪ್ಡೇಟ್ ಕೇಳಿ ನೀವೂ ಶಾಕ್ ಆಗಬಹುದು. ಪ್ರತಿ ತಿಂಗಳು 15ನೇ ತಾರೀಖಿನೊಳಗೆ ಪಡಿತರ ವಿತರಣೆಯಾಗಬೇಕು. ಆದರೆ ಕೆಲವು ಜಿಲ್ಲೆಗಳಲ್ಲಿ ಇನ್ನೂ ಪಡಿತರ ವಿತರಣೆಯಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಇನ್ನೂ ಅಕ್ಕಿಯನ್ನು ಸರಬರಾಜು ಮಾಡಿಲ್ಲ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಇದರಿಂದ ಸರಿಯಾಗಿ ಪಡಿತರ ಪೂರೈಕೆಯಾಗುತ್ತಿಲ್ಲ.

ಕೆಲವು ಪಡಿತರ ಕೋಟಾಗಳ ಅಂಗಡಿಗಳಿಗೆ ಎಫ್‌ಸಿಐನಿಂದ ಗೋಧಿ, ಸಕ್ಕರೆ, ಕಾಳು, ಎಣ್ಣೆ ಮತ್ತು ಉಪ್ಪನ್ನು ಮಾತ್ರ ನೀಡಲಾಗಿದೆ. ಹಾಗಾಗಿ ಜನರು ಮಾತ್ರವಲ್ಲದೇ, ಪಡಿತರ ವಿತರಣೆಗೆ ಅಂಗಡಿಗಳು ಕೂಡಾ ಅಕ್ಕಿಗಾಗಿ ಕಾಯುತ್ತಿದೆ. ಹಾಗಾಗಿ ಅಕ್ಕಿ ಶೀಘ್ರದಲ್ಲೇ ಬರಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ವಿತರಣಾ ವ್ಯವಸ್ಥೆಯಲ್ಲಿನ ಅಡಚಣೆಯುಂಟಾಗಿದ್ದು, ಜನವರಿಯಲ್ಲಿ ಕಾರ್ಡ್ ಹೊಂದಿರುವವರಿಗೆ ಪಡಿತರ ಪಡೆಯಲು ವಿಳಂಬವಾಗುತ್ತಿದೆ.

ಪಡಿತರ ಅಂಗಡಿಗಳಲ್ಲಿ ಅಕ್ಕಿ ಕೋಟಾ ಲಭ್ಯವಿಲ್ಲದ ಕಾರಣ ಪಾಯಿಂಟ್ ಆಫ್ ಸೇಲ್ಸ್ ಮೆಷಿನ್ (ಪಿಒಎಸ್) ಪಡಿತರ ವಿತರಣೆಯನ್ನು ಅನುಮತಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಡಿತರ ಚೀಟಿದಾರರು ತಮ್ಮ ಇಚ್ಛೆಗೆ ವಿರುದ್ಧವಾಗಿಯೂ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತೀಯ ಆಹಾರ ನಿಗಮದಿಂದ ಅಕ್ಕಿ ಪೂರೈಕೆಯಲ್ಲಿ ಏಕೆ ವಿಳಂಬವಾಗುತ್ತಿದೆ ಎಂಬ ಮಾಹಿತಿ ಇದುವರೆಗೆ ಬಹಿರಂಗಗೊಂಡಿಲ್ಲ.

You may also like

Leave a Comment