Home » FD Rule Change: ಬ್ಯಾಂಕ್ ನಲ್ಲಿ FD ಇಟ್ಟವರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್- ಈ ರೀತಿ ಮಾಡಿದ್ರೆ 1 ಕೋಟಿ ಹಣ ನಿಮ್ಮ ಖಾತೆ ಸೇರುತ್ತೆ !!

FD Rule Change: ಬ್ಯಾಂಕ್ ನಲ್ಲಿ FD ಇಟ್ಟವರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್- ಈ ರೀತಿ ಮಾಡಿದ್ರೆ 1 ಕೋಟಿ ಹಣ ನಿಮ್ಮ ಖಾತೆ ಸೇರುತ್ತೆ !!

1 comment
FD Rule Change

FD rule change: ನೀವೇನಾದರೂ ಬ್ಯಾಂಕಿನಲ್ಲಿ FD ಇಟ್ಟಿದ್ದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ನೀವು ಬ್ಯಾಂಕ್ ಸ್ಥಿರ ಠೇವಣಿ (FD) ಹೊಂದಿದ್ದರೆ, ಆರ್ ಬಿಐ (RBI)ನಿಯಮಗಳಲ್ಲಿ ಬದಲಾವಣೆ(FD rule change) ತಂದಿದ್ದು, ನಿಗದಿತ ಅವಧಿಗಿಂತ ಮೊದಲೇ ಇನ್ನೂ ಮುಂದೆ ನೀವು ಹಣ ವಿತ್ ಡ್ರಾ ಮಾಡಬಹುದಾಗಿದೆ.

ಹೌದು!! ಸಾಮಾನ್ಯವಾಗಿ ಬ್ಯಾಂಕ್ ಎಫ್ ಡಿಗಳು(Bank FD)ನಿಗದಿತ ಅವಧಿಯದಾಗಿದ್ದು, ಅವಧಿಗೂ ಮೊದಲೇ ಎಫ್ ಡಿಯಲ್ಲಿನ ಹಣ ವಿತ್ ಡ್ರಾ ಮಾಡಲು ಅವಕಾಶವಿರದು. ಆದರೆ, ಇದೀಗ, ಆರ್ ಬಿಐ ನಿಯಮ ಬದಲಾವಣೆ ಮಾಡಿದೆ. 1 ಕೋಟಿ ರೂ. ವರೆಗಿನ ಮೊತ್ತವನ್ನು ಸ್ಥಿರ ಠೇವಣಿಯಿಂದ (Fixed Deposit) ಅವಧಿಗೂ ಮುನ್ನ ವಿತ್ ಡ್ರಾ ಮಾಡಲು ಈಗ ಅವಕಾಶ ನೀಡಲಾಗಿದೆ. ಬ್ಯಾಂಕ್ ಗಳಲ್ಲಿ ನಾನ್ ಕಾಲೇಬಲ್ ಟರ್ಮ್ ಡೆಫಾಸಿಟ್ ಗಳ ಕನಿಷ್ಠ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸಕ್ತವಿರುವ 15ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಏರಿಕೆ ಮಾಡಿದೆ.

1 ಕೋಟಿ ರೂ. ಹಾಗೂ ಅದಕ್ಕಿಂತ ಕಡಿಮೆ ಮೊತ್ತದ ಎಲ್ಲ ದೇಶೀಯ ಟರ್ಮ್ ಡೆಫಾಸಿಟ್ ಗಳಿಗೆ ಅವಧಿಪೂರ್ವ ವಿತ್ ಡ್ರಾ ಸೌಲಭ್ಯವನ್ನು ಆರ್ ಬಿಐ ಅನುವು ಮಾಡಿಕೊಟ್ಟಿದೆ.ಆರ್ ಬಿಐ ಇತ್ತೀಚಿನ ಸುತ್ತೋಲೆಯಲ್ಲಿ ಅವಧಿಗೂ ಮೊದಲೇ ವಿತ್ ಡ್ರಾ ಮಾಡಲು ಅವಕಾಶ ನೀಡಿದ್ದು, ಈ ಸುತ್ತೋಲೆ ಎಲ್ಲ ವಾಣಿಜ್ಯ ಬ್ಯಾಂಕ್ ಗಳು ಹಾಗೂ ಸಹಕಾರಿ ಬ್ಯಾಂಕ್ ಗಳಿಗೆ ಅನ್ವಯವಾಗುತ್ತದೆ.ಈ ಬದಲಾವಣೆ ಅನಿವಾಸಿ ರುಪಿ ಠೇವಣಿ (NRE) ಹಾಗೂ ಸಾಮಾನ್ಯ ಅನಿವಾಸಿ (NRO) ಠೇವಣಿಗಳಿಗೂ ಅನ್ವಯಿಸಲಿದೆ.

You may also like

Leave a Comment