Home » ಎರಡು ಮಕ್ಕಳ ತಂದೆಯ ಪ್ರೇಮ್ ಕಹಾನಿ| ಕೆಲಸ ಕೊಟ್ಟ ಮಾಲೀಕನ ಮಗಳನ್ನೇ ಕದ್ದು ಮದುವೆಯಾದ ಡ್ರೈವರ್| ರಕ್ಷಿಸಿ ಎಂದು ಬಂದವ ಈಗ ಪೊಲೀಸ್ ಕಸ್ಟಡಿಯಲ್ಲಿ

ಎರಡು ಮಕ್ಕಳ ತಂದೆಯ ಪ್ರೇಮ್ ಕಹಾನಿ| ಕೆಲಸ ಕೊಟ್ಟ ಮಾಲೀಕನ ಮಗಳನ್ನೇ ಕದ್ದು ಮದುವೆಯಾದ ಡ್ರೈವರ್| ರಕ್ಷಿಸಿ ಎಂದು ಬಂದವ ಈಗ ಪೊಲೀಸ್ ಕಸ್ಟಡಿಯಲ್ಲಿ

2 comments

ಎರಡು ಮಕ್ಕಳ ತಂದೆಯೊಬ್ಬ ಯುವತಿಯೋರ್ವಳನ್ನು ಪ್ರೀತಿಸಿ ನಂತರ ಮದುವೆಯಾಗಿ ನಂತರ ಪೊಲೀಸರ ಬಳಿ ರಕ್ಷಣೆಗೆಂದು ಹೋಗಿ ಆರಕ್ಷಕರ ಅತಿಥಿಯಾಗಿದ್ದಾನೆ. ಸೋಮನಿಂಗ ಹಾಗೂ ಅಕ್ಷತಾ ಇಬ್ಬರೂ ವಿಜಯಪುರ ತಾಲೂಕಿನ ಜಾಲಗೇರಿ ಗ್ರಾಮದ ನಿವಾಸಿಗಳು. ಸೋಮನಿಂಗ ವೃತ್ತಿಯಲ್ಲಿ ಕಾರುಚಾಲಕನಾಗಿ ಕೆಲಸ ಮಾಡುತ್ತಿದ್ದು, ಈ ಮೊದಲೇ ಮದುವೆಯಾಗಿ ಇಬ್ಬರು ಮಕ್ಕಳ ತಂದೆ ಕೂಡಾ ಆಗಿದ್ದ.

ಅಕ್ಷತಾ ಮನೆಯ ಕಾರ್ ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ಸೋಮಲಿಂಗ ಕಾಲೇಜಿಗೆ ಡ್ರಾಪ್ ಕೊಡಲು ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರ ಮಧ್ಯೆ ಲವ್ ಶುರುವಾಗಿದೆ. ಇಬ್ಬರೂ ಆರು ವರ್ಷ ಲವ್ ಮಾಡಿದ್ದಾರೆ. ಕಳೆದ ನವೆಂಬರ್ 9 ರಂದು ರಿಜಿಸ್ಟರ್ ಮದುವೆ ಆಗಿದ್ದರು. ಎರಡು ಮದುವೆಯಾದರೇನು? ಸೋಮನಿಂಗನ ಮೊದಲ ಪತ್ನಿ ಜೊತೆ ಅಡ್ಜೆಸ್ಟ್ ಮಾಡಿಕೊಂಡು ಹೋಗುತ್ತೇನೆ. ನಮಗೆ ಜೀವಿಸಲು ಬಿಡಿ ಎಂದು ಅಕ್ಷತಾ ಹೇಳುತ್ತಿದ್ದಾಳೆ.

ಈ ಇಬ್ಬರ ಮದುವೆಗೆ ಕುಟುಂಬದವರು ವಿರೋಧಿಸಿದ್ದಾರೆ. ಅಕ್ಷತಾ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ತನಗೆ ಸೋಮನಿಂಗನೇ ಬೇಕು ಎಂದು ಪೋಷಕರಿಗೆ ಹೇಳಿದ್ದಾಳೆ.

ಅಷ್ಟು ಮಾತ್ರವಲ್ಲದೇ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿ ಗೋವಾ ಸೇರಿದಂತೆ ಹೊರ ರಾಜ್ಯದಲ್ಲಿ ಸುತ್ತಾಡಿ ಬಂದಿದ್ದಾರೆ‌. ಈ ಸಮಯದಲ್ಲಿ ಪೋಷಕರು ಮಿಸ್ಸಿಂಗ್ ಕೇಸ್ ಹಾಕಿದಾಗ ಜೀವ ಬೆದರಿಕೆ ಇದೆ ಎಂದು ಪೊಲೀಸ್ ಠಾಣೆಗೆ ಬಂದಿದ್ದಾರೆ.

ಸೋಮನಿಂಗ ಮೊದಲ ಹೆಂಡತಿಗೆ ವಿಚ್ಛೇದನ ನೀಡದೇ ಅಕ್ಷತಾಳನ್ನು ಎರಡನೇ ಮದುವೆಯಾಗಿದ್ದಾನೆ. ಆದರೆ ಈತ ನನಗೆ ಇಬ್ಬರು ಹೆಂಡತಿಯರು ಇರಲಿ. ನನ್ನ ಮೊದಲ ಪತ್ನಿಯ ಮನವೊಲಿಸುತ್ತೇನೆ ಎಂದು ಹೇಳುತ್ತಿದ್ದಾನೆ. ಈಗ ಈತ ಮೊದಲ ವಿವಾಹ ಮರೆಮಾಚಿ ವಿಜಯಪುರ ನೋಂದಣಿ ಕಚೇರಿಯಲ್ಲಿ ವಿವಾಹ ನೊಂದಾಯಿಸಿದ್ದಾನೆ. ಅಕ್ಷತಾ ಕುಟುಂಬದವರಿಂದ ಬೆದರಿಕೆ ಕರೆ ಬರುತ್ತಿದೆಯಂತೆ. ಈಗ ನಮಗೆ ರಕ್ಷಣೆ ಕೊಡಿ ಎಂದು ಎಸ್ಪಿಯವರಲ್ಲಿ ಇಬ್ಬರೂ ಮನವಿ ಮಾಡಿಕೊಳ್ಳುತ್ತಿದ್ದಾರಂತೆ‌.

You may also like

Leave a Comment