Home » Viagra ರಣನೀತಿ : ವಯಾಗ್ರ ಸೇವಿಸಿ ರಷ್ಯಾ ಯೋಧರಿಂದ ಉಕ್ರೇನಿಗಳ ಮೇಲೆ ರೇಪ್ |

Viagra ರಣನೀತಿ : ವಯಾಗ್ರ ಸೇವಿಸಿ ರಷ್ಯಾ ಯೋಧರಿಂದ ಉಕ್ರೇನಿಗಳ ಮೇಲೆ ರೇಪ್ |

by Mallika
0 comments

ರಷ್ಯಾ( Russia) ಯೋಧರು ಉಕ್ರೇನ್‌ (Ukraine) ಮೇಲೆ ಸಮರ ಸಾರಿದ್ದಾರೆ. ಅಮಾನುಷ ರೀತಿಯಲ್ಲಿ ಉಕ್ರೇನಿ ಸಾಮಾನ್ಯ ನಾಗರಿಕರ ಜತೆ ನಡೆದುಕೊಳ್ಳುವ ದಾರುಣ ಘಟನೆಗಳು ಬೆಳಕಿಗೆ ಬರುತ್ತಲೇ ಇದೆ. ಇದೇ ವರ್ಷದ ಆರಂಭದಲ್ಲಿ ಪ್ರಾರಂಭವಾದ ಯುದ್ಧದ (War) ಇಲ್ಲಿಯವರೆಗೆ 100ಕ್ಕೂ ಹೆಚ್ಚು ಅತ್ಯಾಚಾರಗಳನ್ನು (Rape) ರಷ್ಯಾ ಯೋಧರು ನಡೆಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ವರದಿಯಾಗಿದೆ. ತನ್ನ ಯೋಧರಿಗೆ ವಯಾಗ್ರಾ (Viagra) ಕಾಮೋತ್ತೇಜಕ ಮಾತ್ರೆಗಳನ್ನು ನೀಡಿ, ಉಕ್ರೇನಿಗಳ ಮೇಲೆ ರಷ್ಯಾ ಲೈಂಗಿಕ ದೌರ್ಜನ್ಯ ನಡೆಸುತ್ತಿದೆ. ಇದು ಪುಟಿನ್‌ ಸರ್ಕಾರದ ರಣನೀತಿಯೂ ಹೌದು ಎಂದು ವಿಶ್ವಸಂಸ್ಥೆಯು (United Nations) ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ.

ಉಕ್ರೇನ್‌ನಲ್ಲಿನ ವಿಶ್ವಸಂಸ್ಥೆಯ ಲೈಂಗಿಕ ದೌರ್ಜನ್ಯ ವಿಭಾಗದ ವಿಶೇಷ ಪ್ರತಿನಿಧಿ ಪ್ರಮೀಳಾ ಪ್ಯಾಟನ್‌ ಅವರು ಈ ದಾರುಣ ವಿಷಯವನ್ನು, ವಿಶ್ವಸಂಸ್ಥೆಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.

ರಷ್ಯಾ ಯೋಧರು ವಯಾಗ್ರಾ ಸೇವಿಸಿ, ನಂತರ ಕಾಮೋದ್ರೇಕಿತರಾಗಿ ಕಂಡಕಂಡವರ ಮೇಲೆ ಅತ್ಯಾಚಾರ ಮಾಡುತ್ತಾರೆ. ಹಾಗಂತ ಅತ್ಯಾಚಾರಕ್ಕೆ ಒಳಗಾದ ದುರ್ದೈವಿಗಳೇ ತಮ್ಮ ಬವಣೆಯನ್ನು ನಮ್ಮ ಮುಂದೆ ಹಂಚಿಕೊಂಡಿದ್ದಾರೆ ಎಂದು ವರದಿಯೊಂದು ಪ್ರಕಟಿಸಿದೆ‌ 4 ವರ್ಷದ ಮಕ್ಕಳಿಂದ ಹಿಡಿದು 82 ವರ್ಷದ ವೃದ್ಧೆಯರ ಮೇಲೂ ಅತ್ಯಾಚಾರ ನಡೆದಿದೆ ಎಂದು ವರದಿಯಲ್ಲಿ ಪ್ರಕಟವಾಗಿದ್ದು ನಿಜಕ್ಕೂ ಇದು ಕಳವಳಕಾರಿ ವಿಷಯ.
“ಇದು ಸ್ಪಷ್ಟವಾಗಿ ಮಿಲಿಟರಿ ತಂತ್ರವಾಗಿದೆ” ಎಂದು ಲೈಂಗಿಕ ದೌರ್ಜನ್ಯದ ಕುರಿತು ಯುಎನ್ ವಿಶೇಷ ಪ್ರತಿನಿಧಿ ಹೇಳಿದ್ದಾರೆ.

You may also like

Leave a Comment