Home » ದೇಶವನ್ನು ಹಿಂದೂ ರಾಷ್ಟ್ರ ಬಿಡಿ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ನಾವು ಬಿಡುವುದಿಲ್ಲ, ಪ್ರಜಾಪ್ರಭುತ್ವ ರಾಷ್ಟ್ರವಾಗಿಯೇ ಇರಬೇಕು -ಎಸ್.ಡಿ.ಪಿ.ಐ

ದೇಶವನ್ನು ಹಿಂದೂ ರಾಷ್ಟ್ರ ಬಿಡಿ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ನಾವು ಬಿಡುವುದಿಲ್ಲ, ಪ್ರಜಾಪ್ರಭುತ್ವ ರಾಷ್ಟ್ರವಾಗಿಯೇ ಇರಬೇಕು -ಎಸ್.ಡಿ.ಪಿ.ಐ

by Praveen Chennavara
0 comments

ಪುತ್ತೂರು : ಎನ್‌ಐಎಯಿಂದ ಎಸ್‌ಡಿಪಿಐ ಜಿಲ್ಲಾ ಕಚೇರಿಗೆ ನಡೆಸಿದ ದಾಳಿ ಮತ್ತು ಪಿಎಫ್‌ಐ ನಾಯಕರ ಬಂಧನಕ್ಕೆ ವಿರೋಧಿಸಿ ಎಸ್‌ಡಿಪಿಐ ಪಕ್ಷದಿಂದ ಪುತ್ತೂರು ದರ್ಬೆಯಲ್ಲಿ ಸೆ.24ರಂದು ಸಂಜೆ ಪ್ರತಿಭಟನೆ ನಡೆಯಿತು.

ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ನವಾಜ್ ಕಟ್ಟೆ, ಮಾತನಾಡಿ,ಎನ್‌ಐಎ ಗೃಹ ಮಂತ್ರಿಯ ಟೂಲ್ ಕಿಟ್ ಆಗಿದೆ ಎಂದರು.

ಬಾಂಬು ದಾಳಿ ತರಬೇತಿ ನೀಡುವ ಚಕ್ರವರ್ತಿ ಸೂಲಿಬೆಲೆ, ಬಂದೂಕು ತರಬೇತಿ ನೀಡುವ ಆರ್‌ಎಸ್‌ಎಸ್ ಕಚೇರಿಗೆ ದಾಳಿ ನಡೆಸದೆ ನಮ್ಮ ಸಮುದಾಯದ ಅಮಾಯಕ ನಾಯಕರನ್ನು ಬಂಧಿಸಿದ್ದಾರೆ. ಬಿಜೆಪಿಯ ಫ್ಯಾಸಿಸ್ಟ್ಗೆ ಅಡ್ಡಗಾಲಾಗಿ ನಿಂತಿರುವುದು ಎಸ್‌ಡಿಪಿಐ ಮತ್ತು ಪಿಎಫ್‌ಐ ಮಾತ್ರ. ನಮ್ಮ ಕಟ್ಟಕಡೆಯ ಕಾರ್ಯಕರ್ತನಿರುವ ತನಕ ಈ ದೇಶವನ್ನು ಹಿಂದು ರಾಷ್ಟ್ರ ಬಿಡಿ ಮುಸ್ಲಿಂ ರಾಷ್ಟ್ರವನ್ನಾಗಿಯೂ ಮಾಡಲು ನಾವು ಬಿಡುವುದಿಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರವಾಗಿಯೇ ಇರಬೇಕು’ ಎಂದು ಅವರು ಗುಡುಗಿದರು.

ಸುಳ್ಯ ವಿಧಾನ ಸಭಾ ಕ್ಷೇತ್ರದ ಪಕ್ಷದ ಕಾರ್ಯದರ್ಶಿ ಎಮ್.ಎ ರಫೀಕ್ ಅವರು ಮಾತನಾಡಿ ಎನ್‌ಐಎ ಎಂಬ ಗೂಬೆಗಳಿಗೆ ಪ್ರಜಾಪ್ರಭುತ್ವದ ನೈಜತೆ ಮತ್ತು ಕಾನೂನು ರಕ್ಷಣೆ ಬಗ್ಗೆ ಅರಿವಿಲ್ಲ. ಅವರು ನಮ್ಮ ನಾಯಕರನ್ನು ರಾತ್ರೋ ರಾತ್ರಿ ಬಂಧಿಸಿದ್ದಾರೆ. ಅಕ್ರಮವಾಗಿ ಹೇಡಿತನದಿಂದ ನಮ್ಮ ನಾಯಕರನ್ನು ಬಂಧಿಸಿದ ಎನ್‌ಐಎ ಯೂ ತಕ್ಷಣ ಅಮಾಯಕರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

ಕಚೇರಿಯನ್ನು ಪುಡಿ ಮಾಡಿ ದಾಳಿ ಮಾಡಿದ್ದು ಮಾತ್ರವಲ್ಲದೆ ಪಿಎಪ್‌ಐ ಇಂಡಿಯಾದ ನಾಯಕರುಗಳನ್ನು ರಾತ್ರೋ ರಾತ್ರಿ ಬಂಧಿಸಿದ ಎನ್‌ಐಎ ಮತ್ತು ಬಿಜೆಪಿ ಸರಕಾರದ ದೂರಾಲೋಚನೆ ವಿರುದ್ಧ ಘೋಷಣೆ ಕೂಗಲಾಯಿತು.

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಹಮೀದ್ ಸಾಲ್ಮರ, ಕಾರ್ಯದರ್ಶಿ ಯಯ್ಯ ಕೂರ್ನಡ್ಕ, ಜಿಲ್ಲಾ ಉಪಾಧದ್ಯಕ್ಷ ವಿಕ್ಟರ್ ಮಾರ್ಟಿಸ್, ಸಂಘಟನ ಕಾರ್ಯದರ್ಶಿ ಅಶ್ರಫ್‌ಬಾವು, ನಗರ ಅಧ್ಯಕ್ಷ ಸಿರಾಜ್ ಕೂರ್ನಡ್ಕ ಸೇರಿದಂತೆ ಹಲವಾರು ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

You may also like

Leave a Comment