Home » Second Puc Exam: ಆ.21ರಿಂದ ದ್ವಿತೀಯ ಪಿಯುಸಿ ವಿಶೇಷ ಪೂರಕ ಪರೀಕ್ಷೆ

Second Puc Exam: ಆ.21ರಿಂದ ದ್ವಿತೀಯ ಪಿಯುಸಿ ವಿಶೇಷ ಪೂರಕ ಪರೀಕ್ಷೆ

by Praveen Chennavara
0 comments

 

ಮಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2022-23 ಮತ್ತು ಅದಕ್ಕೂ ಹಿಂದಿನ ವರ್ಷಗಳಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಬಾರಿ ವಿಶೇಷ ಪೂರಕ ಪರೀಕ್ಷೆ (ಎರಡನೇ ಬಾರಿ) ಆಗಸ್ಟ್ 21ರಿಂದ ಸಪ್ಟೆಂಬರ್ 2ರ ವರೆಗೆ ಆಯೋಜಿಸಿದೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳು ತಮ್ಮ ಕಾಲೇಜು ಪ್ರಾಂಶುಪಾಲರನ್ನು ಸಂಪರ್ಕಿಸಿ ಆ.10ರೊಳಗೆ ಹೆಸರುನೋಂದಣಿ ಮಾಡಿಕೊಳ್ಳುವಂತೆಕೋರಲಾಗಿದೆ.

ವಿದ್ಯಾರ್ಥಿಗಳು ವಿಶೇಷ ಪೂರಕ ಪರೀಕ್ಷೆಯ ಸದುಪಯೋಗ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಜಯಣ್ಣ ಸಿ.ಡಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪರೀಕ್ಷೆಗೆ ಸಂಬಂಧಿಸಿದ ಸುತ್ತೋಲೆ ಹಾಗೂ ವೇಳಾಪಟ್ಟಿಯನ್ನು ಜಾಲತಾಣ https://kseab.karnataka.gov.in ನಲ್ಲಿ ವೀಕ್ಷಿಸಬಹುದು ಎಂದು ಪ್ರಕಟನೆ ತಿಳಿಸಿದೆ

You may also like