3
Self Harming: ದಾವಣಗೆರೆ ಜಿಲ್ಲೆಯಲ್ಲಿ ಸಣ್ಣ ಹರೆಯದಲ್ಲೇ ಕುಸ್ತಿಪಟುವಾಗಿ (Wrestler) ಮಿಂಚಿದ್ದ 13ರ ಹರೆಯದ ಹುಡುಗಿ (13 year old Girl)ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವತಿಯನ್ನು ದಾವಣಗೆರೆ ಜಿಲ್ಲೆಯ (Davanagere)ಹರಿಹರ ಪಟ್ಟಣದ ನಿವಾಸಿಯಾಗಿರುವ ಕಾವ್ಯಾ ಪೂಜಾರ್ (13)ಎನ್ನಲಾಗಿದ್ದು, ಈಕೆ ಹರಿಹರದ ಶಿಬಾರ ಸರ್ಕಲ್ ಬಳಿ ಇರುವ ಗರಡಿ ಮನೆಯಲ್ಲಿ ಆತ್ಮಹತ್ಯೆ(Self Harming) ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಧಾರವಾಡ ಕುಸ್ತಿ ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾವ್ಯಾ ಎರಡು ದಿನಗಳ ಹಿಂದೆ ಹರಿಹರದ ಮನೆಗೆ ತೆರಳಿದ್ದಳು. ಹಲವು ಪ್ರಶಸ್ತಿಗಳನ್ನು ಪಡೆದಿದ್ದ ಈಕೆ ಬೆಳಗ್ಗೆ ಎದ್ದು ಗರಡಿ ಮನೆಗೆ ತರಬೇತಿಗೆ ಹೋಗಿದ್ದ ಆಕೆ ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ ಯುವತಿ ಯಾವ ಕಾರಣಕ್ಕೆ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ಕಾರಣ ತಿಳಿದುಬಂದಿಲ್ಲ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
