Home » Road Accident: ಭೀಕರ ರಸ್ತೆ ಅಪಘಾತ, 7 ಮಂದಿ ಅಸ್ಸಾಂ ಇಂಜಿನೀಯರಿಂಗ್ ವಿದ್ಯಾರ್ಥಿಗಳ ಸಾವು!

Road Accident: ಭೀಕರ ರಸ್ತೆ ಅಪಘಾತ, 7 ಮಂದಿ ಅಸ್ಸಾಂ ಇಂಜಿನೀಯರಿಂಗ್ ವಿದ್ಯಾರ್ಥಿಗಳ ಸಾವು!

0 comments
Road Accident

Road Accident: ಭೀಕರ ರಸ್ತೆ ಅಪಘಾತಕ್ಕೆ (Road Accident) 7 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವನ್ನಪ್ಪಿರುವ (death)ಘಟನೆ ಅಸ್ಸಾಂ (Assam) ರಾಜ್ಯದ ಗುವಾಹಟಿ ಜಲುಕ್ಟರಿ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

 

ಇಲ್ಲಿನ ಅಜಾರಾ ಪ್ರದೇಶದಿಂದ ವೇಗವಾಗಿ ಬರುತ್ತಿದ್ದಂತಹ ಕಾರು ಡಿವೈಡರ್ ದಾಟಿ ಎದುರಿನ ಲೇನ್‌ನಲ್ಲಿ ಸಾಗುತ್ತಿದ್ದ ಸರಕು ಸಾಗಣೆ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆ ಪರಿಣಾಮ ಕಾರು ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದಾರೆ. ಹಾಗೇ ಸರಕು ಸಾಗಣೆ ಟ್ರಕ್ ನಲ್ಲಿದ್ದ 6 ಮಂದಿ  ಗಾಯಗೊಂಡಿದ್ದಾರೆ. ಮೃತರನ್ನು ಅಸ್ಸಾಂನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

 

ಇನ್ನು ಘಟನೆಯ‌ ಮಾಹಿತಿ ತಿಳಿದ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ, ಹಿಮಂತ್ ಅವರು ಈ ಬಗ್ಗೆ ಟ್ವಿಟರ್ ನಲ್ಲಿ ಟ್ವಿಟ್ ಮಾಡಿದ್ದು, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. “ ಅಪಘಾತದಿಂದ ಯುವ ಹಾಗೂ ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವುದು ತೀವ್ರ ನೋವು ತಂದಿದೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಘಟನೆ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: School Re-open: ಶಾಲಾರಂಭಕ್ಕೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ, ಮಧ್ಯಾಹ್ನದ ಊಟದ ಜತೆಗೆ ಸಿಹಿ ತಿಂಡಿ !

You may also like

Leave a Comment