Home » ಶಬರಿಮಲೆ ಯಾತ್ರಿಗಳು ಸಿನಿಮಾ ತಾರೆಯರ ಮತ್ತು ರಾಜಕಾರಣಿಗಳ ಫೋಟೋ ತರುವಂತಿಲ್ಲ – ಹೈ ಕೋರ್ಟ್

ಶಬರಿಮಲೆ ಯಾತ್ರಿಗಳು ಸಿನಿಮಾ ತಾರೆಯರ ಮತ್ತು ರಾಜಕಾರಣಿಗಳ ಫೋಟೋ ತರುವಂತಿಲ್ಲ – ಹೈ ಕೋರ್ಟ್

by Praveen Chennavara
0 comments

ಶಬರಿಮಲೆಗೆ ಬರುವ ಯಾತ್ರಿಗಳು ಸಿನಿಮಾ ತಾರೆಯರ ಮತ್ತು ರಾಜಕಾರಣಿಗಳ ಫೋಟೋ ಅಥವಾ ಬ್ಯಾನರನ್ನು ದೇವರ ದರ್ಶನ ಪಡೆಯುವ ವೇಳೆ ತರುವಂತಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

ಯಾತ್ರಾರ್ಥಿಯೊಬ್ಬರ ದೂರಿನ ಆಧಾರದ ಮೇಲೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿಜಿ ಅಜಿತ್ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಪ್ರತಿಯೊಬ್ಬ ಭಕ್ತರು ಆರಾಧನಾ ಪದ್ಧತಿಯಂತೆ, ಸಾಂಪ್ರದಾಯಿಕ ವಿಧಿಗಳಂತೆ ಮಾಡುವುದನ್ನು ನೋಡಿಕೊಳ್ಳಬೇಕೆಂದು ತಿರುವಾಂಕೂರ್ ದೇವಸ್ವಂ ಬೋರ್ಡ್‌ಗೆ ನಿರ್ದೇಶನ ನೀಡಿದೆ.

You may also like

Leave a Comment