Home » Shameful Act: ದಲಿತ ಯುವಕನೋರ್ವನ ಮೇಲೆ ಮೂತ್ರ ವಿಸರ್ಜಿಸಿ ಮಾರಣಾಂತಿಕ ಹಲ್ಲೆ!! ಅಷ್ಟಕ್ಕೂ ನಡೆದದ್ದೆಲ್ಲಿ?!

Shameful Act: ದಲಿತ ಯುವಕನೋರ್ವನ ಮೇಲೆ ಮೂತ್ರ ವಿಸರ್ಜಿಸಿ ಮಾರಣಾಂತಿಕ ಹಲ್ಲೆ!! ಅಷ್ಟಕ್ಕೂ ನಡೆದದ್ದೆಲ್ಲಿ?!

0 comments

Shameful Act: ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು(Shameful Act) ಹೆಚ್ಚಾಗುತ್ತಿದ್ದು, ಇದೀಗ, ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರ ಮೇಲೆ ಮೂತ್ರ(Urinated)ವಿಸರ್ಜನೆ ಮಾಡಿ, ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ ಆಘಾತಕಾರಿ ಘಟನೆ ಸೋಮವಾರ ನಡೆದಿದೆ ಎನ್ನಲಾಗಿದೆ.

ಮಣಿಮೂರ್ತೀಶ್ವರಂನ ಮನೋಜ್ ಕುಮಾರ್ (21) ಮತ್ತು ಆತನ ಸ್ನೇಹಿತ ಮರಿಯಪ್ಪನ್ (19) ಸ್ನಾನ ಮಾಡಲು ತಾಮಿರಬರಣಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಇವರಿಬ್ಬರೂ ಮನೆಗೆ ಹಿಂದಿರುಗುತ್ತಿದ್ದಾಗ ನದಿಯ ಬಳಿ ಮದ್ಯ (Drinks)ಸೇವಿಸುತ್ತಿದ್ದ ಕೆಲವರು ತಡೆದು ಇವರ ಜಾತಿಯ ಬಗ್ಗೆ ಕೇಳಿದ್ದಾರೆ ಎನ್ನಲಾಗಿದೆ.

ದಲಿತ ಸಮುದಾಯಕ್ಕೆ ಸೇರಿದವರು ಎಂದು ತಿಳಿಯುತ್ತಿದ್ದಂತೆ ಆರೋಪಿಗಳು ಇಬ್ಬರ ಮೇಲೆ ಹಲ್ಲೆ ಮಾಡಲಾರಂಭಿಸಿದ್ದಾರೆ. ಇದಲ್ಲದೆ ಆರೋಪಿಗಳು ಯುವಕರು ಆರೋಪಿಗಳನ್ನು ವಿವಸ್ತ್ರಗೊಳಿಸಿ ಅವರ ಮೇಲೆ ಮೂತ್ರ ವಿಸರ್ಜಿಸಿದ್ದಾರೆ ಎಂದು ಸಂತ್ರಸ್ತರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ತಾಜೈಯೂರು ನಿವಾಸಿ ಪೊನ್ನುಮಣಿ (25ನಲ್ಲಮುತ್ತು (21), ಆಯಿರಂ (19), ರಾಮರ್ (22), ಶಿವ (22) ಮತ್ತು ಲಕ್ಷ್ಮಣನ್ (22) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Chaitra Fraud Case: ಚೈತ್ರಾ ಟಿಕೆಟ್ ಡೀಲ್ ಪ್ರಕರಣ- ಸಿಸಿಬಿ ತನಿಖೆ ಕಂಪ್ಲೀಟ್, ಮುಂದೇನು?!

You may also like

Leave a Comment