6
Shivamoga News: ಪ್ರೇಮಿಗಳ ನಡುವೆ ಕಿರಿಕ್ ನಡೆದಿದ್ದು, ಕೋಪಗೊಂಡ ಯುವಕ ಯುವತಿಗೆ ಚಾಕು ಇರಿದಿರುವ ಘಟನೆಯೊಂದು ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ನಡೆದಿದೆ. ಚೇತನ್ ಎಂಬಾತನೇ ಆರೋಪಿ. ಗಾಯಗೊಂಡ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವಕ ಯುವತಿ ಇಬ್ಬರೂ ಆಡೋನಹಳ್ಳಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಇಂದು ಇವರಿಬ್ಬರ ನಡುವೆ ಜಗಳ ಆಗಿದೆ. ಅದು ಕೂಡಾ ಸಾರ್ವಜನಿಕರ ಎದುರೇ. ಈ ವೇಳೆ ಕೋಪಗೊಂಡ ಚೇತನ್ ಚಾಕುವಿನಿಂದ ಯುವತಿಗೆ ಚುಚ್ಚಿದ್ದಾನೆ. ನಂತರ ಸಾರ್ವಜನಿಕರು ಯುವತಿಯನ್ನು ರಕ್ಷಿಸಿದ್ದು, ಚೇತನ್‌ಗೆ ಥಳಿಸಿದ್ದಾರೆ. ಇದರಿಂದ ಚೇತನ್ ಕೂಡಾ ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
