Home » Shoaib Malik marries Sana Javed: ನಟಿ ಸನಾ ಜಾವೇದ್‌ನನ್ನು ಮದುವೆಯಾದ ಶೋಯೆಬ್‌ ಮಲಿಕ್‌!!

Shoaib Malik marries Sana Javed: ನಟಿ ಸನಾ ಜಾವೇದ್‌ನನ್ನು ಮದುವೆಯಾದ ಶೋಯೆಬ್‌ ಮಲಿಕ್‌!!

0 comments

Shoaib Malik marries Pakistan actress Sana Javed: ಶೋಯಬ್ ಮಲಿಕ್ ಪಾಕಿಸ್ತಾನದ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ. ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾರಿಂದ ಬೇರ್ಪಡುವ

ವದಂತಿಗಳ ಮಧ್ಯೆ, ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಪಾಕಿಸ್ತಾನದ ಖ್ಯಾತ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ಜನವರಿ 20 ರ ಶನಿವಾರದಂದು ಶೋಯೆಬ್ ಮಲಿಕ್ ಅವರ ನಿಕಾಹ್ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಶೋಯೆಬ್ ಮಲಿಕ್ ಅವರಿಗೆ ಇದು ಮೂರನೆಯ ಮದುವೆ. ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್‌ ಮಲಿಕ್‌ ಅವರ ಮೊದಲ ವಿವಹಾ ಆಯೇಶಾ ಸಿದ್ದಿಕಿ ಜೊತೆ ನಡೆದಿತ್ತು. ಅನಂತರ ಆಯೇಷಾಗೆ ವಿಚ್ಛೇದನ ನೀಡಿದ ಬಳಿಕ, ಶೋಯೆಬ್ ಸಾನಿಯಾ ಮಿರ್ಜಾ ಅವರನ್ನು ವಿವಾಹವಾದರು. ಇದೀಗ, ಸಾನಿಯಾ ವಿಚ್ಛೇದನದ ವದಂತಿಗಳ ನಡುವೆ, ಅವರು ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.

You may also like

Leave a Comment