ರಾಷ್ಟ್ರೀಯ ತನಿಖಾ ದಳ NIA ದ ಕೇರಳದ ರಾಜ್ಯ ಪೊಲೀಸ್ ಮುಖ್ಯಸ್ಥರು ನಿಷೇಧಿತ ಪಿಎಫ್‌ಐ ಸಂಘಟನೆಯ ಜೊತೆ 873 ಪೊಲೀಸ್ ಅಧಿಕಾರಿಗಳು ಸಂಬಂಧ ಹೊಂದಿದೆ ಎಂಬ ಕಳವಳಕಾರಿ ಮಾಹಿತಿಯನ್ನು ತಿಳಿಸಿದ್ದಾರೆ. ದೇಶ ಕಾಯುವ ಮತ್ತು ದೇಶದ ಪ್ರಜೆಗಳ ರಕ್ಷಕರಾದ ಆರಕ್ಷಕರೇ ದೇಶದ್ರೋಹಿ ಕೃತ್ಯಗಳಲ್ಲಿ ಭಾಗಿಯಾದ ಭಯಾನಕ ಅಂಶ ಬೆಳಕಿಗೆ ಬಂದಿದೆ.
ಪಿಎಫ್‌ಐಯನ್ನು ತನಿಖೆ ನಡೆಸುವಾಗ ಹಣಕಾಸಿನ ಅವ್ಯವಹಾರಗಳಲ್ಲಿ ಎನ್ಐಎಗೆ ಸಬ್ ಇನ್ಸ್‌ಪೆಕ್ಟರ್, ಸ್ಟೇಷನ್ ಹೆಡ್ ಆಫೀಸ್ ಶ್ರೇಣಿ ಮತ್ತು ಸಿವಿಲ್ ಪೊಲೀಸರ ಕೈವಾಡವಿರುವ ಮಾಹಿತಿ ಕೆಲವು ಮೂಲಗಳಿಂದ ತಿಳಿದು ಬಂದಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ವಿವರವನ್ನು ಕಳೆದ ಫೆಬ್ರವರಿಯಲ್ಲಿ ಪಿಎಫ್ಐಗೆ ನೀಡಿದ ಸಿವಿಲ್ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದಲೇ ವಜಾಗೊಳಿಸಲಾಗಿತ್ತು. ಇದೇ ರೀತಿಯ ಆರೋಪದ ಹಿನ್ನೆಲೆಯಲ್ಲಿ ಮುನ್ನಾರ್ ಪೊಲೀಸ್ ಠಾಣೆಯ ಎಸ್‌ಐ ಸೇರಿದಂತೆ ಮೂವರನ್ನು ವರ್ಗಾವಣೆ ಮಾಡಲಾಗಿತ್ತು.
ಪ್ರಾಥಮಿಕ ತನಿಖೆಯನ್ನು ಪಿಎಫ್ಐ ಮೇಲೆ ಎನ್ ಐ ಎ ದಾಳಿಗೂ ಮುನ್ನವೇ ಮಾಹಿತಿಯನ್ನು ಪೊಲೀಸರ ಪಿಎಫ್ಐ ನೀಡಿದ್ದಾರೆ ಎಂದು ಆರೋಪವಿದೆ. ಸ್ಪೆಷಲ್ ಬ್ರ್ಯಾಂಚ್, ಗುಪ್ತಚರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಅಧಿಕಾರಿಗಳ ಜೊತೆ ಪಿಎಫ್‌ಐಗೆ ನಂಟಿತ್ತು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
