Shocking Video: ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್( Viral News) ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ಸುದ್ದಿಯನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಚೀನಾದಲ್ಲಿ 18 ವರ್ಷದ ಹುಡುಗಿಯೊಬ್ಬಳು ತನ್ನ ಕಾಲಿನ ಬೆರಳಿಗೆ ಇಲಿ (Rat)ಕಚ್ಚಿತೆಂದು ಕೋಪಗೊಂಡು ಮಾಡಿದ್ದೇನು ಗೊತ್ತೇ?? ತಿಳಿದರೆ ಶಾಕ್ ಆಗೋದು ಗ್ಯಾರಂಟಿ!!
ವರದಿಯ ಅನುಸಾರ, ಹಾಸ್ಟೆಲ್ ವಿದ್ಯಾರ್ಥಿಯೊಬ್ಬಳ ಬೆರಳಿಗೆ ಇಲಿಯೊಂದು ಕಚ್ಚಿದ್ದು, ಇದರಿಂದ ಕೋಪಗೊಂಡ ಯುವತಿ ಇಲಿಯನ್ನು ಹಿಡಿಯಲು ಮೌಸ್ ಟ್ರ್ಯಾಪ್ ಬಳಸುವ ಬದಲಿಗೆ ಇಲಿಯ ತಲೆಯನ್ನೇ ಬಲವಾಗಿ ಕಚ್ಚಿದ್ದಾಳೆ.ಆಕೆ ಬಿಗಿಯಾಗಿ ಇಲಿಯನ್ನು ಹಿಡಿದದ್ದರಿಂದ ಇಲಿ ಉಸಿರುಗಟ್ಟಿ ಸತ್ತು ಹೋಗಿದೆ. ಈ ನಡುವೆ, ಆಕೆ ಸಿಟ್ಟಿನಿಂದ ಜೋರಾಗಿ ಇಲಿಯನ್ನು ಕಚ್ಚಿದ್ದರಿಂದ ಆಕೆಯ ತುಟಿಗಳಿಗೂ ಗಾಯವಾಗಿದ್ದು, ತಕ್ಷಣವೇ ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ.
