Home » Beer Taste Change: ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್- ಇನ್ಮುಂದೆ ರುಚಿಯಲ್ಲೂ ಆಗಲಿದೆ ಬದಲಾವಣೆ !!

Beer Taste Change: ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್- ಇನ್ಮುಂದೆ ರುಚಿಯಲ್ಲೂ ಆಗಲಿದೆ ಬದಲಾವಣೆ !!

1 comment
Beer Taste Change

Beer Taste Change: ತುಸು ಕಹಿ ಟೇಸ್ಟ್ ಇರುವ ಬಿಯರ್ ಅನ್ನು ಚಪ್ಪರಿಸಿ ಕುಡಿಯೋರಿಗೆ ಇದೀಗ ಮತ್ತಷ್ಟು ಕಹಿ ಸುದ್ದಿ ಇಲ್ಲಿದೆ. ಸಾಮಾನ್ಯವಾಗಿ ನೀರು ಮತ್ತು ಚಹಾದ ನಂತರ ಬಿಯರ್ ವಿಶ್ವದ ಅತೀ ಬೇಡಿಕೆಯ ಪಾನೀಯವಾಗಿದೆ. ಇತ್ತೀಚೆಗೆ ಮಧ್ಯ ಪ್ರಿಯರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲೂ ಬಿಯರ್ ನ್ನು ಜನರು ಹೆಚ್ಚಾಗಿ ಇಷ್ಟ ಪಡುತ್ತಾರೆ ಅನ್ನೋದು ಗೊತ್ತಿರುವ ವಿಚಾರ. ಕೆಲವರಿಗಂತೂ ದಿನಾ ಒಂದೊಂದು ಬಿಯರ್ ಬೇಕೇ ಬೇಕು. ಆದರೆ ಇನ್ಮುಂದೆ ಬಿಯರ್ ಟೇಸ್ಟ್ ನಲ್ಲಿ ಕಹಿ (Beer Taste Change) ಹೆಚ್ಚಲಿದೆ. ಹೌದು, ಹೆಚ್ಚುತ್ತಿರುವ ತಾಪಮಾನವು ಬಿಯರ್ ಗುಣಮಟ್ಟ ಮತ್ತು ರುಚಿಯನ್ನು ಬದಲಾಯಿಸುತ್ತಿದೆ
ಎಂದು ಅಧ್ಯಯನವೊಂದು ತಿಳಿಸಿದೆ.

ಈಗಾಗಲೇ ಹವಾಮಾನ ಬದಲಾವಣೆಯನ್ನು ಎದುರಿಸಲು ವಿಶ್ವದಾದ್ಯಂತ ಸರ್ಕಾರದ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದರೂ, ಮಾನವ ಚಟುವಟಿಕೆಗಳಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯು ತಾಪಮಾನದ ಏರಿಕೆಗೆ ಹೆಚ್ಚಾಗಿ ಕೊಡುಗೆ ನೀಡುತ್ತಿದೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನವು ಮಳೆ, ಅಂತರ್ಜಲ ಮತ್ತು ಕಾಡುಗಳ ಮೇಲೆ ಮಾತ್ರವಲ್ಲದೆ ನಾವು ಸೇವಿಸುವ ಆಹಾರ ಮತ್ತು ಪಾನೀಯಗಳ ಮೇಲೂ ಪರಿಣಾಮ ಬೀರುತ್ತಿದೆ ಎನ್ನುವುದು ಇಲ್ಲಿ ಗಮನಾರ್ಹ. ಆದ್ದರಿಂದ ಹವಾಮಾನ ಬದಲಾವಣೆಯ ಪರಿಣಾಮದಿಂದಾಗಿ ಬಿಯರ್ ರುಚಿಯನ್ನು ಸಹ ಹಾನಿಗೊಳಿಸಬಹುದು
ಎಂದು ವಿಜ್ಞಾನಿಗಳ ಅಧ್ಯಯನವು ಕಂದುಕೊಂಡಿದೆ.

ಮುಖ್ಯವಾಗಿ ವಿವಿಧ ರೀತಿಯ ಬಿಯರ್ ಗಳ ಕಹಿ ಮತ್ತು ರುಚಿಯನ್ನು ನಿರ್ಧರಿಸುವಲ್ಲಿ ಹಾಪ್
ಫ್ಲವರ್ ಪ್ರಮುಖ ಪಾತ್ರ ವಹಿಸುತ್ತದೆ. ಮುಖ್ಯವಾಗಿ ಬೀಜಗಳು ಮತ್ತು ಹಾಪ್ಸ್ ನೊಂದಿಗೆ ಬೆರೆಸಿ, ಅವುಗಳನ್ನು ಚೆನ್ನಾಗಿ ಬೇಯಿಸಲಾಗುತ್ತದೆ. ನಂತರ ಬಿಯರ್ ನ ಕಹಿ ಬಿಡುಗಡೆಯಾಗುತ್ತದೆ. ಇದರರ್ಥ ಈ ಹೂವುಗಳು ಬಿಯರ್ ರುಚಿಗೆ ಬಹಳ ಮುಖ್ಯ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಈ ಹೂವುಗಳು ಒಣಗುತ್ತಿವೆ.

ಇದೀಗ ನೇಚರ್ ಕಮ್ಯುನಿಕೇಷನ್ಸ್ ಎಂಬ ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಇದು ಬಿಯರ್ ರುಚಿಯನ್ನು ಬದಲಾಯಿಸುವುದಲ್ಲದೆ ಮುಂಬರುವ ದಿನಗಳಲ್ಲಿ ಬಿಯರ್ ಬೆಲೆಯನ್ನು ಹೆಚ್ಚಿಸುತ್ತದೆ. ಬಿಯರ್ ತಯಾರಿಕೆಯು ಮಧ್ಯ ಯುರೋಪ್ನಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ಇದು ಕ್ರಿ.ಪೂ 3500-3100 ರ ನವಶಿಲಾಯುಗದ ಅವಧಿಗೆ ಸೇರಿದೆ. ನೀರಿನ ಹೊರತಾಗಿ, ಮಾಲೈಡ್ ಬಾರ್ಲಿ, ಯೀಸ್ಟ್, ಹಾಪ್ ಮತ್ತು ಬಿಯರ್ ಇದಕ್ಕೆ ವಿಶಿಷ್ಟ ಪರಿಮಳವನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅದಕ್ಕಾಗಿಯೇ ಸಾಂಪ್ರದಾಯಿಕ ಬಿಯರ್ ಗಳ ಜನಪ್ರಿಯತೆಯ ಹೆಚ್ಚಳದೊಂದಿಗೆ, ಉನ್ನತ ಗುಣಮಟ್ಟ, ಪರಿಮಳಯುಕ್ತ ಹಾಪ್ ಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಬರ ಪರಿಸ್ಥಿತಿಗಳು ಮತ್ತು ಹೆಚ್ಚಿನ ತಾಪಮಾನವು ಈ ಹೂವುಗಳ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

ಸಂಶೋಧಕರ ಪ್ರಕಾರ, ಯುರೋಪ್ನಲ್ಲಿ ಹಾಪ್ಸ್ ಬೆಳೆ 2050 ರ ವೇಳೆಗೆ ಶೇಕಡಾ 4-18 ರಷ್ಟು ಕುಸಿಯುವ ನಿರೀಕ್ಷೆಯಿದೆ. ಇದಲ್ಲದೆ, ಸುಗಂಧಿತ ಹಾಪ್ ಆಮ್ಲಗಳ ಉತ್ಪಾದನೆಯು ಶೇಕಡಾ 20-31 ರಷ್ಟು ಕಡಿಮೆಯಾಗುತ್ತದೆ. 2020 ರಲ್ಲಿ ಕೋವಿಡ್-19ಸಾಂಕ್ರಾಮಿಕ
ರೋಗವು ಪ್ರಾರಂಭವಾದಾಗಿನಿಂದ ಬಿಯರ್ ಬೆಲೆ ಶೇಕಡಾ 13 ರಷ್ಟು ಹೆಚ್ಚಾಗಿದೆ. ಅದಲ್ಲದೆ ಹೆಚ್ಚು ತೀವ್ರವಾದ ತಾಪಮಾನವು ಹಾಪ್ಸ್ ಆಲ್ಫಾ ಕಹಿ ಆಮ್ಲಗಳ ಇಳಿಕೆಗೆ ಕಾರಣವಾಯಿತು ಸಂಶೋಧಕರು ಕಂಡು ಕೊಂಡಿದ್ದಾರೆ.

ಇದನ್ನೂ ಓದಿ: ಪಾಕ್ ಟೀಂ ಎದುರು ‘ಜೈ ಶ್ರೀರಾಮ್ ಘೋಷಣೆ’ – ಮತ್ತೆ ಹರಿಹಾಯ್ದ ಉದಯನಿಧಿ ಸ್ಟಾಲಿನ್

You may also like

Leave a Comment