Home » ಹೊಲದಲ್ಲಿ ಸ್ಪರ್ಶಿಸಿದ ವಿದ್ಯುತ್ ತಂತಿ!! ಸ್ಥಳದಲ್ಲೇ ಗಂಡಾನೆಗಳ ಸಾವು!!

ಹೊಲದಲ್ಲಿ ಸ್ಪರ್ಶಿಸಿದ ವಿದ್ಯುತ್ ತಂತಿ!! ಸ್ಥಳದಲ್ಲೇ ಗಂಡಾನೆಗಳ ಸಾವು!!

0 comments

ಶಿವಮೊಗ್ಗ: ಅರಣ್ಯದ ಅಂಚಿನ ರೈತರು ಕಾಡು ಪ್ರಾಣಿಗಳಿಂದ ಬೆಳೆ ಕಾಪಾಡಲು ಹಾಕಿದ ವಿದ್ಯುತ್ ತಂತಿ ಸ್ಪರ್ಶಿಸಿ ಗಂಡಾನೆಗಳೆರಡು ಮೃತಪಟ್ಟ ದುರಂತವೊಂದು ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಗೆ ಬರುವ ಚನ್ನಹಳ್ಳಿ ಎಂಬಲ್ಲಿ ನಡೆದಿದೆ.

ರೈತರು ತಮ್ಮ ಬೆಳೆಗಳಿಗೆ ಕಾಡು ಪ್ರಾಣಿಗಳಿಂದಾಗುವ ಉಪಟಳವನ್ನು ತಪ್ಪಿಸಲು ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದರು ಎನ್ನಲಾಗಿದ್ದು, ಜೋಳದ ಹೊಲಕ್ಕೆ ಕಾಡಾನೆಗಳು ನುಗ್ಗಿದ ಪರಿಣಾಮ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಆನೆಗಳು 20-22 ವರ್ಷದೊಳಗಿನ ಪ್ರಯದ್ದಾಗಿದೆ ಎನ್ನಲಾಗಿದೆ. ಅಲ್ಲದೇ ಸ್ಥಳೀಯರು ಕಾಡು ಹಂದಿ ಬೇಟೆಗೆ ವಿದ್ಯುತ್ ತಂತಿ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.

You may also like

Leave a Comment