Home » Breaking News | SSLC ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ | ಪರೀಕ್ಷೆ ಬರೆಯುತ್ತಿದ್ದಂತೆ ಬದುಕಿನ ಆನ್ಸರ್ ಶೀಟ್ ಕಸಿದುಕೊಂಡ ವಿಧಿ

Breaking News | SSLC ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ | ಪರೀಕ್ಷೆ ಬರೆಯುತ್ತಿದ್ದಂತೆ ಬದುಕಿನ ಆನ್ಸರ್ ಶೀಟ್ ಕಸಿದುಕೊಂಡ ವಿಧಿ

1 comment

ಮೈಸೂರು: ಖುಷಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿದ ವಿದ್ಯಾರ್ಥಿನಿಯೋರ್ವಳು ಪರೀಕ್ಷೆ ಬರೆಯುತ್ತಿದ್ದ ಸಂದರ್ಭ ಹೃದಯಾಘಾತಗೊಂಡು ಮೃತಪಟ್ಟ ಘಟನೆಯು ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಪರೀಕ್ಷಾ ಕೇಂದ್ರವೊಂದರಲ್ಲಿ ನಡೆದಿದೆ.

ಮೃತ ಬಾಲಕಿಯನ್ನು 10 ನೇ ತರಗತಿಯ ವಿದ್ಯಾರ್ಥಿನಿ, ಎಸ್.ಎಸ್.ಎಲ್.ಸಿ ಪರೀಕ್ಷಾ ಅಭ್ಯರ್ಥಿ ಅನುಶ್ರೀ ಎಂದು ಗುರುತಿಸಲಾಗಿದೆ.ಈಕೆ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆಯುತಿದ್ದ ವೇಳೆ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment