Home » Religious Conversion: ಹಿಂದೂಗಳನ್ನೆಲ್ಲಾ ಕ್ರಿಶ್ಚಿಯನ್‌ಗೆ ಮತಾಂತರ ಮಾಡುತ್ತಿರುವ ಆರೋಪ- ಆಕ್ರೋಶಗೊಂಡ ಸ್ಥಳೀಯರು ಮಾಡಿದ್ದೇನು ಗೊತ್ತಾ?

Religious Conversion: ಹಿಂದೂಗಳನ್ನೆಲ್ಲಾ ಕ್ರಿಶ್ಚಿಯನ್‌ಗೆ ಮತಾಂತರ ಮಾಡುತ್ತಿರುವ ಆರೋಪ- ಆಕ್ರೋಶಗೊಂಡ ಸ್ಥಳೀಯರು ಮಾಡಿದ್ದೇನು ಗೊತ್ತಾ?

0 comments

Religious Conversion: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿ ಹಿಂದೂಗಳನ್ನು(Hindu)ಕ್ರಿಶ್ಚಿಯನ್ ಧರ್ಮಕ್ಕೆ(Christian)ಮತಾಂತರ(Religious Conversion) ಮಾಡುತ್ತಿರುವ ಕುರಿತು ಆರೋಪಿಸಿ ಸ್ಥಳೀಯರು ಪ್ರಾರ್ಥನಮಂದಿರಕ್ಕೆ ನುಗ್ಗಿ ಗಲಾಟೆ ಮಾಡಿರುವ ಘಟನೆ ವರದಿಯಾಗಿದೆ.

ಚಿತ್ತಾಕುಲ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಚಿತ್ತಾಕುಲದ ಶ್ಯಾಮ್ ನಾಯ್ಕ್ ಎಂಬುವವರು ಪ್ರಾರ್ಥನೆ (Prayer)ಆಯೋಜನೆ ಮಾಡಿದ್ದರೆನ್ನಲಾಗಿದೆ. ಫಾಸ್ಟರ್ ಬಹುತೇಕ ಹಿಂದೂಗಳನ್ನು ಸೇರಿಸಿಕೊಂಡು ಪ್ರಾರ್ಥನೆ ಮಾಡುತ್ತಿದ್ದ ಎನ್ನಲಾಗಿದೆ. ಈ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಹಿಂದೂಗಳು ಅಮಲಿನ ವಸ್ತು ನಶೆಯಲ್ಲಿ ತೇಲಾಡುವ ಭಂಗಿಯಲ್ಲಿ ಕುಳಿತಿದ್ದರು ಎಂದು ವರದಿಯಾಗಿದೆ.

ಸಭಾಂಗಣದ ಕೊಠಡಿಗಳಲ್ಲಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಮಾಹಿತಿ ನೀಡುತ್ತಿದ್ದ ಫಾಸ್ಟರ್, ಹಿಂದೂಗಳನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದ ಕುರಿತು ಸ್ಥಳೀಯರಿಗೆ ಮಾಹಿತಿ ದೊರೆತಿದೆ. ಹೀಗಾಗಿ, ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸ್ಥಳಿಯರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಬಹುತೇಕರು ಹಿಂದೂಗಳೇ ಆಗಿದ್ದ ಹಿನ್ನೆಲೆ ಹಿಂದುಗಳನ್ನು ಮತಾಂತರ ಮಾಡಲು ಮುಂದಾಗಿರುವ ಶಂಕೆ ವ್ಯಕ್ತಪಡಿಸಿ ಗಲಾಟೆ ಮಾಡಿದ್ದಾರೆ.

ಈ ವೇಳೆ ಸ್ಥಳಿಯರು ಫಾಸ್ಟರ್ ಹಿಂದುಗಳನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡಲು ಮುಂದಾದ ಕುರಿತು ಆರೋಪ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಕೆಲಹೊತ್ತು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.

You may also like

Leave a Comment