Home » Karnataka government: ‘ಜನನ-ಮರಣ ನೋಂದಣಿ’ ಶುಲ್ಕದಲ್ಲಿ ಭಾರೀ ಹೆಚ್ಚಳ !! ಸರ್ಕಾರದಿಂದ ಜನತೆಗೆ ಶಾಕ್

Karnataka government: ‘ಜನನ-ಮರಣ ನೋಂದಣಿ’ ಶುಲ್ಕದಲ್ಲಿ ಭಾರೀ ಹೆಚ್ಚಳ !! ಸರ್ಕಾರದಿಂದ ಜನತೆಗೆ ಶಾಕ್

2 comments
Karnataka government

Karnataka government: ಕೇಂದ್ರ ಸರ್ಕಾರವು ಕೆಲವು ದಿನಗಳ ಹಿಂದಷ್ಟೇ ಕೆಲವು ಸರ್ಕಾರಿ ಸೌಲಭ್ಯಗಳಿಗೆ ಜನನ-ಮರಣಪತ್ರ ಕಡ್ಡಾಯ ಎಂಬುದಾಗಿ ಸೂಚಿಸಿತ್ತು. ಅಂತೆಯೇ ಎಲ್ಲ ಜನರು ಇದನ್ನು ಮಾಡಿಸಿಕೊಳ್ಳಲು, ಪಡೆಯಲು ಮುಂದಾಗುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ(Karnataka Government) ಈ ಕುರಿತು ರಾಜ್ಯದ ಜನತೆಗೆ ದೊಡ್ಡ ಶಾಕ್ ನೀಡಿದ್ದು ಜನನ – ಮರಣ ನೋಂದಣಿ ಪ್ರಮಾಣ ಪತ್ರದ ಶುಲ್ಕವನ್ನು ಬಾರಿ ಹೆಚ್ಚಣೆ ಮಾಡಿದೆ.

ಹೌದು, ಜನನ, ಮರಣ ಘಟಿಸಿದ 21 ದಿನಗಳ ನಂತರ ಹಾಗೂ 30 ದಿನಗಳ ಒಳಗಾಗಿ ನೋಂದಾಯಿಸುವ ವಿಳಂಬ ನೋಂದಣಿಗೆ ಹಾಲಿ ಇರುವ ವಿಳಂಬ ಶುಲ್ಕವನ್ನು 2 ರೂ. ಬದಲು 1000 ರೂ.ಗೆ 30 ದಿನಗಳ ನಂತರ 5 ರೂ. ಬದಲು 200 ರೂ. 1 ವರ್ಷ ಬಳಿಕ ನೋಂದಣಿಗೆ 10 ರೂ. ಬದಲು 500 ರೂ. ಶುಲ್ಕವನ್ನು ಪರಿಷ್ಕರಿಸಲಾಗಿದೆ.

ಏನಿದು ಜನನ-ಮರಣ ನೋಂದಣಿ ಕಾಯಿದೆ
ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ- 2023 (Registration Of Births and Deaths (Amendment) Bill- 2023) ಅನ್ನು ಕಳೆದು ಸಂಸತ್ ಅಧಿವೇಶನದಲ್ಲಿ ಅಂಗೀಕರಿಸಿದೆ. ಜುಲೈ 26ರಂದು ಇದನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. 1969ರಲ್ಲಿ ತಂದ ಜನನ ಮತ್ತು ಮರಣಗಳ ನೋಂದಣಿ ಕಾಯಿದೆ ಇದೇ ಮೊದಲ ಬಾರಿಗೆ ತಿದ್ದುಪಡಿ ಕಾಣುತ್ತಿದೆ. ಹಲವು ಪ್ರಮುಖ ತಿದ್ದುಪಡಿಗಳನ್ನು ಇದರಲ್ಲಿ ಮಾಡಲಾಗಿದೆ.

ಪ್ರಮಾಣಪತ್ರ ಕಡ್ಡಾಯ
ಈ ಕಾಯಿದೆ ಜಾರಿಗೆ ಬಂದ ನಂತರ ಜನಿಸಿದ ಯಾವುದೇ ವ್ಯಕ್ತಿಯ ಜನ್ಮ ದಿನಾಂಕ/ಮರಣ ದಿನಾಂಕ ಮತ್ತು ಸ್ಥಳವನ್ನು ಸಾಬೀತುಪಡಿಸಲು ಜನನ ಮತ್ತು ಮರಣ ಪ್ರಮಾಣಪತ್ರದ ಬಳಕೆ ಕಡ್ಡಾಯವಾಗಲಿದೆ. ಜನನ ಪ್ರಮಾಣಪತ್ರದ ಮಾಹಿತಿಯನ್ನು ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ಮತದಾರರ ಪಟ್ಟಿ ತಯಾರಿಕೆ, ಸರ್ಕಾರಿ ಹುದ್ದೆಗೆ ನೇಮಕಾತಿ ಮತ್ತು ಕೇಂದ್ರ ಸರ್ಕಾರ ನಿರ್ಧರಿಸುವ ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಇದನ್ನೂ ಓದಿ: RBI New Rule: ಸಹಕಾರಿ ಸಂಘಗಳಿಗೆ ಬಂತು ಹೊಸ ರೂಲ್ಸ್- RBI ನಿಂದ ಖಡಕ್ ವಾರ್ನಿಂಗ್

You may also like

Leave a Comment