Home » ಇನ್ನು ಮುಂದೆ ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರೊಂದಿಗೆ ಕುಳಿತು ‘ಪೋರ್ನ್’ಚಿತ್ರಗಳನ್ನು ಒಟ್ಟಿಗೆ ವೀಕ್ಷಿಸಲು ಅವಕಾಶ | ಯಾವ ಕಾಲೇಜಿನಲ್ಲಿ ? ಇಲ್ಲಿದೆ ಡಿಟೇಲ್ಸ್

ಇನ್ನು ಮುಂದೆ ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರೊಂದಿಗೆ ಕುಳಿತು ‘ಪೋರ್ನ್’ಚಿತ್ರಗಳನ್ನು ಒಟ್ಟಿಗೆ ವೀಕ್ಷಿಸಲು ಅವಕಾಶ | ಯಾವ ಕಾಲೇಜಿನಲ್ಲಿ ? ಇಲ್ಲಿದೆ ಡಿಟೇಲ್ಸ್

0 comments

ಇತ್ತೀಚಿನ ಕಾಲದಲ್ಲಿ ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ಜ್ಞಾನ ಇರಲಿ ಎಂದು ಕಲಿಸಿಕೊಡಲಾಗುತ್ತದೆ. ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಲಾಗುತ್ತದೆ. ಇದೊಂದು ಒಳ್ಳೆಯ ಬೆಳವಣಿಗೆ ಕೂಡಾ ಹೌದು.

ಇದೀಗ ಅದರ ಮುಂದುವರಿದ ಭಾಗವಾಗಿ ಇಲ್ಲೊಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ‘ಹಾರ್ಡ್‌ಕೋರ್’ ಅಶ್ಲೀಲತೆಯ ಕೋರ್ಸ್ ಅನ್ನು ಕಲಿಸಿಕೊಡುತ್ತಿದೆ. ಇಷ್ಟು ಮಾತ್ರವಲ್ಲದೇ ಈ ಕೋರ್ಸ್ ಕಲಿಸುವ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರೊಂದಿಗೆ ಕುಳಿತು ಪೋರ್ನ್ ಚಲನಚಿತ್ರಗಳನ್ನು ಒಟ್ಟಿಗೆ ವೀಕ್ಷಿಸುವ ಅವಕಾಶ ಕೂಡಾ ಇದೆ.

ಯುಎಸ್ ನಗರದ ಉತಾಕ್‌ನಲ್ಲಿರುವ ವೆಸ್ಟ್ ಮಿನಿಸ್ಟರ್ ಕಾಲೇಜು ಈ ಕೋರ್ಸ್ ಅನ್ನು ಮೊದಲ ಬಾರಿಗೆ ನೀಡುತ್ತಿದೆ. ಕೋರ್ಸ್ ‘ಫಿಲ್ಟ್ 3000’ ಕಾರ್ಯಕ್ರಮದ ಅಡಿಯಲ್ಲಿ ಬರುತ್ತದೆಯಂತೆ ಮತ್ತು ಮೂರು ಕ್ರೆಡಿಟ್‌ಗಳನ್ನು ಹೊಂದಿರುತ್ತದೆಯಂತೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ ಜನಾಂಗ, ವರ್ಗ, ಲಿಂಗ ಮತ್ತು ಪ್ರಾಯೋಗಿಕ, ಆಮೂಲಾಗ್ರ ಕಲಾ ಪ್ರಕಾರದ ಲೈಂಗಿಕತೆಯನ್ನು ಚರ್ಚಿಸುವುದು ಕೋರ್ಸ್‌ನ ಮುಖ್ಯ ಗುರಿಯಾಗಿದೆ. ಕಾಲೇಜಿನ ಪ್ರಕಾರ, ಇದು ಕೆಲವು ಆಯ್ದ  ಕೋರ್ಸ್‌ಗಳನ್ನು ಮಾತ್ರ ಕಲಿಸುವುದು ಮತ್ತು ಅಶ್ಲೀಲತೆಯ ಕೋರ್ಸ್ ‘ಸಾಮಾಜಿಕ ಸಮಸ್ಯೆಗಳನ್ನು ವಿಶ್ಲೇಷಿಸಲು ಒಂದು ಅವಕಾಶ’ ಎಂದು ಹೇಳಿದೆ.

ಈ ಅಶ್ಲೀಲ ಕೋರ್ಸ್ ವಿದ್ಯಾರ್ಥಿಗಳು ವಿವಾದಾತ್ಮಕ ವಿಷಯಗಳ ಗಂಭೀರ ತನಿಖೆಯಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆಯೇ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ ಎಂದು ಕಾಲೇಜು ಆಡಳಿತದ ನಂಬಿಕೆ.

ಕಾಲೇಜು ಅಧಿಕಾರಿಗಳು ಲೈಂಗಿಕ ದೃಶ್ಯಗಳನ್ನು ವಿದ್ಯಾರ್ಥಿಗಳ ಜೊತೆ  ಒಟ್ಟಿಗೆ ನೋಡುವುದು ‘ಸಂಪೂರ್ಣವಾಗಿ ಅಸಹ್ಯಕರ’ ಎಂದು ಕೆಲವರು ಟೀಕೆ ಮಾಡಿದ್ದಾರೆ. ಈ ಕೋರ್ಸನ್ನು 2022-2023 ಶೈಕ್ಷಣಿಕ ವರ್ಷದಲ್ಲಿ ಈ ಪೋರ್ನ್ ತರಗತಿಯನ್ನು ನಡೆಸಲಾಗುವುದಂತೆ.

‘ಅದರಿಂದ ಬರೀ ದುಡ್ಡಷ್ಟೇ ಅಲ್ಲ, ಅತ್ಯುತ್ತಮ ಲೈಂಗಿಕ ಶಿಕ್ಷಣ ಸಿಗುತ್ತದೆ. ಸಮಾಜದ ವಿವಿಧ ಜನ ವರ್ಗಗಳಲ್ಲಿ ಇರುವ ಲೈಂಗಿಕ ಕಲೆಯ ಮಾಹಿತಿ ನಮ್ಮ ವಿದ್ಯಾರ್ಥಿಗಳಿಗೆ ಲಭಿಸುತ್ತದೆ. ಸಾಮಾಜಿಕ ಸಮಸ್ಯೆಯಾಗಿ ಅದು ಹೇಗೆ ಬದಲಾಗುತ್ತದೆ? ಅದನ್ನು ಸರಿಪಡಿಸುವುದು ಹೇಗೆ ಎನ್ನುವ ದಾರಿಗಳ ಕುರಿತೂ ಹೇಳಿಕೊಡಲಾಗುತ್ತದೆ. ಕೇಳುವವರಿಗೆ ಅದು ಅಶ್ಲೀಲ ಎನ್ನಿಸಿದರೂ ಮನುಷ್ಯನ ಅಸ್ತಿತ್ವಕ್ಕೆ ಅದು ಅನಿವಾರ್ಯ ಎನ್ನುವುದನ್ನು ಯಾರು ಮರೆಯಬಾರದು,” ಎಂದು ಕಾಲೇಜಿನ ಮುಖ್ಯಸ್ಥರು ಹೇಳಿದ್ದಾರೆ.

ಭಾರಿ ವಿರೋಧ ಮತ್ತು ವಿವಾದದ ಬಳಿಕ ಕಾಲೇಜು ತನ್ನ ಕೋರ್ಸ್‌ಗಳ ಪಟ್ಟಿಯಿಂದ ಪೋರ್ನೋಗ್ರಫಿ ಸಿನಿಮಾ ತರಗತಿಯನ್ನು ತೆಗೆದು ಹಾಕಿದೆ ಎಂದು ವರದಿಯಾಗಿದೆ. ಈ ಕಾಲೇಜು ಹಾಸ್ಯ, ಹಾರರ್, ಆಕ್ಷನ್ ಸೇರಿದಂತೆ ವಿಭಿನ್ನ ಬಗೆಯ ಸಿನಿಮಾಗಳ ಕುರಿತಾದ ಕೋರ್ಸ್‌ಗಳನ್ನು ಕಲಿಸುತ್ತದೆ.

You may also like

Leave a Comment