Home » Viral Video : ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದರೆಂದು ಶಿಕ್ಷಕರನ್ನೇ ಮರಕ್ಕೆ ಕಟ್ಟಿ ಥಳಿಸಿದ ವಿದ್ಯಾರ್ಥಿಗಳು !!! ವೀಡಿಯೋ ವೈರಲ್

Viral Video : ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದರೆಂದು ಶಿಕ್ಷಕರನ್ನೇ ಮರಕ್ಕೆ ಕಟ್ಟಿ ಥಳಿಸಿದ ವಿದ್ಯಾರ್ಥಿಗಳು !!! ವೀಡಿಯೋ ವೈರಲ್

by Mallika
0 comments

ಕಡಿಮೆ ಅಂಕ ಬಂದರೆ ವಿದ್ಯಾರ್ಥಿಗಳು ಏನು ಮಾಡುತ್ತಾರೆ. ಅಬ್ಬಬ್ಬಾ ಎಂದರೆ ಮತ್ತಷ್ಟು ಚೆನ್ನಾಗಿ ಕಲಿತು ಹೆಚ್ಚು ಅಂಕ ಗಳಿಸೋಕೆ ಪ್ರಯತ್ನ ಪಡುತ್ತಾರೆ. ಆದರೆ ಇಲ್ಲೊಂದು ಶಾಲೆಯ ವಿದ್ಯಾರ್ಥಿಗಳು ಕಂಡಿಮೆ ಅಂಕ ನೀಡಿದರೆಂದು ಶಿಕ್ಷಕನನ್ನೇ ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆಯೊಂದು ನಡೆದಿದೆ. ಈ ಘಟನೆ ಜಾರ್ಖಂಡ್ ನ ದುಮ್ಮಾ ಜಿಲ್ಲೆಯ ವಸತಿ ಶಾಲೆಯಲ್ಲಿ ನಡೆದಿದೆ.

ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಶಾಲೆಯ ಗಣಿತ ಶಿಕ್ಷಕ ಮತ್ತು ಗುಮಾಸ್ತರನ್ನೇ ಮರಕ್ಕೆ ಕಟ್ಟಿಹಾಕಿ ವಿದ್ಯಾರ್ಥಿಗಳು ( Student) ಥಳಿಸಿರುವ ಘಟನೆ ನಡೆದಿದೆ. ಸಮವಸ್ತ್ರ ಧರಿಸಿದ ಶಾಲಾ ಮಕ್ಕಳ ಒಂದು ದೊಡ್ಡ ಗುಂಪು ಉಪನ್ಯಾಸ ನೀಡುವಾಗ ಶಿಕ್ಷಕರನ್ನು ಮರಗಳಿಂದ ಕಟ್ಟಿಹಾಕಿ ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಂತರ ವಿದ್ಯಾರ್ಥಿಗಳು ವೀಡಿಯೊವನ್ನು ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್ ಮಾಡಿದರು. ಇಷ್ಟಾದರೂ, ಆ ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಜವಾಗಿಯೂ ಅರ್ಹತೆ ಹೊಂದಿದ್ದಾರೆಯೇ ಅಥವಾ ಶಿಕ್ಷಕರು ಉದ್ದೇಶಪೂರ್ವಕವಾಗಿ ಅವರಿಗೆ ಕಡಿಮೆ ಗ್ರೇಡ್ ಗಳನ್ನು ನೀಡಿದ್ದಾರೆಯೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ, “ನಾವು ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದೇವೆ.ಎಲ್ಲಾ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದ್ದೇವೆ. ನಾವು ಅಲ್ಲಿಗೆ ತಲುಪಿದಾಗ, ವಿದ್ಯಾರ್ಥಿಗಳು ಪ್ರಾಕ್ಟಿಕಲ್ಸ್ ನಲ್ಲಿ ತಮಗೆ ಬಹಳ ಕಡಿಮೆ ಅಂಕಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಹಾಗೂ ಇದಕ್ಕೆ ತಮ್ಮ ಶಿಕ್ಷಕರಿಂದ ಸೂಕ್ತ ಪ್ರತಿಕ್ರಿಯೆಯನ್ನು ಬಂದಿಲ್ಲ ಎಂದು ಹೇಳಿದ್ದಾರೆ.

You may also like

Leave a Comment