Home » ಸುಳ್ಯ | ಗೂನಡ್ಕ ಬಳಿ ದನಕ್ಕೆ ಡಿಕ್ಕಿ ಹೊಡೆದ ಬೈಕ್ | ದನ ಸ್ಥಳದಲ್ಲೇ ಸಾವು, ಸವಾರರಿಗೆ ಗಂಭೀರ ಗಾಯ

ಸುಳ್ಯ | ಗೂನಡ್ಕ ಬಳಿ ದನಕ್ಕೆ ಡಿಕ್ಕಿ ಹೊಡೆದ ಬೈಕ್ | ದನ ಸ್ಥಳದಲ್ಲೇ ಸಾವು, ಸವಾರರಿಗೆ ಗಂಭೀರ ಗಾಯ

0 comments

ಸುಳ್ಯದಿಂದ ಕೊಯನಾಡಿಗೆ ಹೋಗುತ್ತಿದ್ದ ಬೈಕ್ ದನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ದನ ಸ್ಥಳದಲ್ಲಿ ಸಾವಿಗೀಡಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಗೂನಡ್ಕ ಸಮೀಪ ನಡೆದಿದೆ.

ಕೊಯಿನಾಡು ಪರಿಸರದ ಸವಾದ್ ಹಾಗೂ ಮಿರ್ಷದ್ ಎಂಬ ಇಬ್ಬರು ಯುವಕರು ಮಂಗಳೂರಿಗೆ ಹೋಗಿದ್ದು, ಸಂಜೆ ಮರಳಿ ಬರುವ ಸಂದರ್ಭದಲ್ಲಿ ಗೂನಡ್ಕ ಸಮೀಪ ದನ ರಸ್ತೆಗೆ ಒಮ್ಮೆಲೆ ಬಂದ ಕಾರಣ ಬೈಕ್ ದನಕ್ಕೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಅಪಘಾತದಿಂದ ಸವಾದ್ ರವರಿಗೆ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಮಿರ್ಷದ್ ರವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಸುಳ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

You may also like

Leave a Comment