Home » ಸುಳ್ಯ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಆಳಕ್ಕೆ ಬಿದ್ದ ಕಾರು

ಸುಳ್ಯ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಆಳಕ್ಕೆ ಬಿದ್ದ ಕಾರು

by Praveen Chennavara
0 comments

ಸುಳ್ಯ : ಇನ್ನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಆಳಕ್ಕೆ ಉರುಳಿ ಬಿದ್ದು ಓರ್ವನ ಗಂಭೀರ ಗಾಯಗೊಂಡ ಬಗ್ಗೆ ಸುಳ್ಯದಿಂದ ವರದಿಯಾಗಿದೆ.

ಮಣಿಪಾಲ ಮೂಲದ ಸಮೃದ್ಧಿ ಸಹಕಾರ ಸಂಸ್ಥೆಗೆ ಸೇರಿದ ಇನ್ನೋವಾ ಕಾರು ಮಡಿಕೇರಿಗೆ ಹೋಗಿ ಮರಳಿ ಮಣಿಪಾಲಕ್ಕೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಕಾರು ಉರುಳಿ ಅಲ್ಲೇ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ.

ಅಪಘಾತದಿಂದ ಕಾರಿನಲ್ಲಿದ್ದವರ ಪೈಕಿ ಓರ್ವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment