Home » ಸುಳ್ಯ:25ಕ್ಕೂ ಹೆಚ್ಚು ದನಗಳನ್ನು ಲಾರಿಯಲ್ಲಿ ಸಾಗಾಟ|ಸಂಪಾಜೆ ಗೇಟಿನಲ್ಲಿ ವಾಹನ ತಪಾಸಣೆ ವೇಳೆ ಪತ್ತೆ

ಸುಳ್ಯ:25ಕ್ಕೂ ಹೆಚ್ಚು ದನಗಳನ್ನು ಲಾರಿಯಲ್ಲಿ ಸಾಗಾಟ|ಸಂಪಾಜೆ ಗೇಟಿನಲ್ಲಿ ವಾಹನ ತಪಾಸಣೆ ವೇಳೆ ಪತ್ತೆ

0 comments

ಸುಳ್ಯ: ಈಚರ್ ಲಾರಿಯೊಂದರಲ್ಲಿ 25
ಕ್ಕೂ ಹೆಚ್ಚು ದನಗಳು,ಸುಳ್ಯ ಹಾಗೂ ಮಡಿಕೇರಿಯ ಗಡಿ
ಪ್ರದೇಶವಾದ ಸಂಪಾಜೆ ಗೇಟಿನಲ್ಲಿ ವಾಹನ
ತಪಾಸಣೆ ಸಂದರ್ಭ ಪತ್ತೆಯಾದ ಘಟನೆ ಇಂದು ನಡೆದಿದೆ.

ರಾತ್ರಿ ಮಡಿಕೇರಿ ಕಡೆಯಿಂದ ಈಚರ್ ಲಾರಿಯಲ್ಲಿ
ದನಗಳನ್ನು ಸಾಗಿಸುತ್ತಿದ್ದು,ಸಂಪಾಜೆ
ಗೇಟಿನಲ್ಲಿ ಸಿಬ್ಬಂದಿಗಳು ವಿಚಾರಣೆ ನಡೆಸಿದಾಗ
ಇದು ದನದ ಫುಡ್ ಸಾಗಾಟ ಎಂದು ಚಾಲಕ
ಹೇಳಿದ್ದಾನೆ. ಆದರೆ ಆತನ ಮಾತಿನಿಂದ ಅನುಮಾನಗೊಂಡು ಗೇಟಿನ ಸಿಬ್ಬಂದಿಗಳು ಲಾರಿಯ ಒಳಗೆ ಇಣುಕಿ ನೋಡಿದಾಗ
ದನದ ಫುಡ್ ನ ಜತೆಗೆ 25 ಕ್ಕೂ ಹೆಚ್ಚು ದನಗಳು
ಕಂಡು ಬಂದಿವೆ.

ಈ ವಿಚಾರವಾಗಿ ಚಾಲಕನನ್ನು ಮತ್ತಷ್ಟು ಪ್ರಶ್ನೆ
ಮಾಡಿದಾಗ ಆತ ಹಾಗೂ ಈಚರ್ ಗಾಡಿಯಲ್ಲಿದ್ದ
ಮತ್ತೊಬ್ಬ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ.ಇದೀಗ ಲಾರಿ ಸಂಪಾಜೆ ಗೇಟಿನಲ್ಲಿದ್ದು, ಇದು
ಎಲ್ಲಿಂದ ಬರುತ್ತಿತ್ತು ಮತ್ತು ಎಲ್ಲಿಗೆ
ಕೊಂಡೊಯ್ಯಲಾಗುತ್ತಿತ್ತೆಂದು ಎಂದು ಇಲಾಖೆಯವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

You may also like

Leave a Comment