Home » ಬೆಳ್ಳಾರೆ ಪೊಲೀಸ್ ಠಾಣಾ ಎಸೈ ಸುಹಾಸ್ ಆರ್ ವರ್ಗಾವಣೆ ,ನೂತನ ಎಸೈ ಆಗಿ ಸಂತೋಷ್ ಬಿ.ಪಿ

ಬೆಳ್ಳಾರೆ ಪೊಲೀಸ್ ಠಾಣಾ ಎಸೈ ಸುಹಾಸ್ ಆರ್ ವರ್ಗಾವಣೆ ,ನೂತನ ಎಸೈ ಆಗಿ ಸಂತೋಷ್ ಬಿ.ಪಿ

by Praveen Chennavara
0 comments
Sullia

Sullia: ಬೆಳ್ಳಾರೆ ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ಸುಹಾಸ್ ಆರ್. ಅವರಿಗೆ ವರ್ಗಾವಣೆಯಾಗಿದೆ. ಬೆಳ್ಳಾರೆ ಪೊಲೀಸ್ ಠಾಣೆಯ ನೂತನ ಎಸ್‌ಐ ಆಗಿ ಸಂತೋಷ್ ಬಿ.ಪಿ.ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ ಎಂದು ತಿಳಿದು ಬಂದಿದೆ (Sullia news).

Sullia

ನೂತನ ಎಸೈ ಸಂತೋಷ್ ಬಿ.ಪಿ

 

ಬೆಳ್ತಂಗಡಿ ಸಂಚಾರಿ ಠಾಣೆಯ ಎಸ್‌ಐ ಆಗಿದ್ದ ಸಂತೋಷ್‌ ಅವರಿಗೆ ಬೆಳ್ಳಾರೆಗೆ ವರ್ಗಾವಣೆಯಾಗಿದೆ. ಒಂದು ವರ್ಷದ ಹಿಂದೆ ಸುಹಾಸ್ ಅವರು ಬೆಳ್ಳಾರೆ ಠಾಣೆಯ ಎಸ್‌ಐ ಆಗಿ ಆಗಮಿಸಿದ್ದರು.

Sullia

ಸುಹಾಸ್ ಆರ್

 

ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಾಗೂ ಅಹಿತಕರ ಘಟನೆಯ ಬಳಿಕ ಎಸೈ ಆಗಿದ್ದ ರುಕ್ಮ ನಾಯ್ಕ್ ಅವರಿಗೆ ವರ್ಗಾವಣೆಯಾಗಿ ಕುಂದಾಪುರದಲ್ಲಿ ಎಸೈ ಆಗಿದ್ದ ಸುಹಾಸ್ ಅವರು ಬೆಳ್ಳಾರೆ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

You may also like