Home » ಭೂಹಗರಣ ಪ್ರಕರಣ : ಸಂಸದ, ಖ್ಯಾತ ನಟನ ಸಹೋದರನನ್ನು ಅರೆಸ್ಟ್ ಮಾಡಿದ ಪೊಲೀಸರು !

ಭೂಹಗರಣ ಪ್ರಕರಣ : ಸಂಸದ, ಖ್ಯಾತ ನಟನ ಸಹೋದರನನ್ನು ಅರೆಸ್ಟ್ ಮಾಡಿದ ಪೊಲೀಸರು !

0 comments

ಭೂ ಹಗರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ, ಸಂಸದ ಸುರೇಶ್ ಗೋಪಿ ಅವರ ಸಹೋದರ ಸುನೀಲ್ ಗೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಅಸಿಂಧು ಎಂದು ಕೋರ್ಟ್ ಹೇಳಿದ್ದ ಭೂಮಿಯೊಂದನ್ನು ಮಾರಾಟ ಮಾಡಿರುವ ಆರೋಪ ಸುನೀಲ್ ಅವರ ಮೇಲಿದೆ. ಇವರ ವಿರುದ್ಧ ಕೊಯಮತ್ತೂರಿನ ಜಿಎನ್ ಮಿಲ್ಸ್ ನಿವಾಸಿ ಗಿರಿಧರನ್ ಎನ್ನುವವರು ದೂರು ದಾಖಲು ಮಾಡಿದ್ದರು. ಹಾಗಾಗಿ ಇವರನ್ನು ಕೊಯಮತ್ತೂರಿನ ಪೊಲೀಸರು ಬಂಧಿಸಿದ್ದಾರೆ.

ಮಯಿಲ್ ಸಾಮಿ ಎನ್ನುವವರು 4.52 ಎಕರೆ ಜಮೀನಿನ ಮಾಲೀಕರು. ನವಕರೈ ಪ್ರದೇಶದಲ್ಲಿ ಇವರ ಜಮೀನು ಇತ್ತು. ಅದನ್ನು ಸುನೀಲ್ ಗೋಪಿ ಖರೀದಿ ಮಾಡಿದ್ದರು. ಆದರೆ ಕೆಲವು ಕಾರಣಗಳಿಂದ ಈ ಜಮೀನಿನ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಆಗ ಕೋರ್ಟ್ ಈ ಜಮೀನಿಗೆ ಸಂಬಂಧಿಸಿದಂತೆ ಮಾಡಿರುವ ಬಾಂಡ್ ನೋಂದಣಿ ಅಸಿಂಧು ಎಂದು ಘೋಷಿಸಿತ್ತು.

ಇದು ತಿಳಿದಿದ್ದರೂ ಸುನೀಲ್ ಅವರು ಮೋಸದಿಂದ ಜಮೀನನ್ನು ಗಿರಿಧರನ್ ಅವರಿಗೆ ಮಾರಾಟ ಮಾಡಿದ ಆರೋಪ ಹೊತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ 97 ಲಕ್ಷ ರೂಪಾಯಿಗಳನ್ನು ಗಿರಿಧರನ್ ಅವರಿಂದ ಪಡೆದುಕೊಂಡಿದ್ದಾರೆ. ನಂತರ ಜಮೀನಿನ ದಾಖಲೆಗಳನ್ನು ಪರಿಶೀಲಿಸಿದಾಗ ತಾವು ಮೋಸ ಹೋಗಿರುವುದು ಗಿರಿಧರನ್ ಅವರಿಗೆ ತಿಳಿಯಿತು.

You may also like

Leave a Comment