Home » ಕೈ ಸರ್ಜರಿಗೆ ಹೋದವಳ ಪ್ರಾಣವೇ ಹೋಯಿತು!

ಕೈ ಸರ್ಜರಿಗೆ ಹೋದವಳ ಪ್ರಾಣವೇ ಹೋಯಿತು!

by Praveen Chennavara
0 comments

ಬೆಂಗಳೂರು : ಕೈ ಸರ್ಜರಿಗೆ ಹೋದವಳ ಪ್ರಾಣವೇ ಹೋಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ ಹೊರಹಾಕಿದ್ದಾರೆ.ಮೃತ ಯುವತಿಯನ್ನು ತೇಜಸ್ವಿನಿ ಎಂದು ಗುರುತಿಸಲಾಗಿದೆ.

ಮಾರತಹಳ್ಳಿ ಜೀವಿಕಾ ಆಸ್ಪತ್ರೆ ಆಸ್ಪತ್ರೆ ವಿರುದ್ಧ ಪೋಷಕರು ಪೋಷಕರ ಆಕ್ರೋಶ ಹೊರಹಾಕುತ್ತಿದ್ದಾರೆ. ತೇಜಸ್ವಿನಿ ಮೂಲತಃ ಬಾಗೇಪಲ್ಲಿ ತಾಲೂಕಿನವರು. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಳು.

ತೇಜಸ್ವಿನಿ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದಳು. ನಿನ್ನೆ ಬಾತ್ ರೂಮಿನಲ್ಲಿ ಬಿದ್ದು ಕೈಗೆ ಗಾಯಗಳಾಗಿದ್ದವು. ಈ ಹಿನ್ನೆಲೆ ಮುಂಗೈ ಶಸ್ತ್ರಚಿಕಿತ್ಸೆಗಾಗಿ ಜೀವಿಕಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶಸ್ತ್ರಚಿಕಿತ್ಸೆ ನಡೆದ ಕೆಲವೇ ಗಂಟೆಗಳಲ್ಲಿ ತೇಜಸ್ವಿನಿ ಮೃತಪಟ್ಟಿದ್ದಾಳೆ. ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ತೇಜಸ್ವಿನಿ ಸಾವನ್ನಪ್ಪಿದ್ದಾಳೆ ಅಂತಾ ಆರೋಪ ಮಾಡಿದ್ದಾರೆ.

ತೇಜಸ್ವಿನಿ ಬೆಳಗ್ಗೆ 4ಕ್ಕೆ ದಾಖಲಾಗಿದ್ದು,ಮಧ್ಯಾಹ್ನ 12ಕ್ಕೆ ಸರ್ಜರಿಯಾಗಿದೆ. ಸಂಜೆ 4 ಗಂಟೆಗೆ ಯುವತಿ ಸಾವನ್ನಪ್ಪಿದ್ದಾಳೆ. ಯುವತಿಗೆ ಅನಸ್ತೇಷಿಯಾ ನೀಡಿದ್ದ ಡಾ. ಶಶಾಂಕ್, ಡಾ.ಅಶೋಕ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. HAL ಪೊಲೀಸರು ಡಾ.ಶಶಾಂಕ್‌ರನ್ನು ವಶಕ್ಕೆ ಪಡೆದಿದ್ದಾರೆ.

You may also like

Leave a Comment