2
ಉದಯಪುರದಲ್ಲಿ ನಡೆದ ಹತ್ಯೆ ಮಾನವ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇದು ಮಾನವಿಯ ಮೌಲ್ಯಗಳ, ಬದುಕುವ ಹಕ್ಕಿನ ಮೇಲೆ ಮಾಡಿದ ಧಾಳಿ. ಧರ್ಮಾಂದತೆ, ಭಯೋತ್ಪಾದನೆ ಯನ್ನು ಸಹಿಸಲು ಸಾದ್ಯವಿಲ್ಲ ಮತ್ತು ಇಂತ ಹೀನ ಮನಸ್ತಿತ್ಯ ಮನುಷ್ಯರಿಗೆ ಸಮಾಜದಲ್ಲಿ ಜಾಗವಿಲ್ಲ. ಈ ಘಟಣೆಯನ್ನು ನಾಗರಿಕ ಹಕ್ಕುಗಳ ವೇದಿಕೆ ಅತ್ಯಂತ ಕಟು ಶಬ್ದಗಳಿಂದ ಖಂಡಿಸಿದೆ. ಇಂತಾ ಘಟನೆಗಳು ಮಾನವ ಸಮಾಜದಲ್ಲಿ ಎಂದಿಗೂ ನಡೆಯಬಾರದೆಂದೂ ರಾಜ್ಯಾಧ್ಯಕ್ಷ ಆದರ್ಶ ಕ್ರಾಸ್ತಾ ಮತ್ತು ರಾಜ್ಯ ಕಾರ್ಯದರ್ಶಿಗಳ ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
