Tamil Nadu: ಸರಕಾರವು ಮಹಿಳೆಯರಿಗೆ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಈ ಮೂಲಕ ತಮಿಳುನಾಡು( Tamil Nadu) ಸರಕಾರವು ಮತ್ತೊಂದು ಕಲ್ಯಾಣ ಯೋಜನೆಯನ್ನು ಘೋಷಿಸಿದೆ. ಕಲೈನಾರ್ ಮಹಿಳಾ ಹಕ್ಕುಗಳ ಅನುದಾನ ಯೋಜನೆ ಇದಾಗಿದ್ದು, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಈ ಯೋಜನೆಯ ಮೂಲಕ ಪ್ರತಿ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಹಣ ದೊರಕುತ್ತದೆ. ಈ ಹಣವನ್ನು ನೇರವಾಗಿ ಅವರವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಇಷ್ಟು ಮಾತ್ರವಲ್ಲದೇ ಮುಖ್ಯಮಂತ್ರಿ ಡೆಬಿಟ್ ಕಾರ್ಡ್ ಕೂಡಾ ನೀಡಿದ್ದಾರೆ.
ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 1000ರೂ. ಖಾತೆಗೆ ಜಮಾ ಆಗುತ್ತದೆ. ರಾಜ್ಯ ಸರಕಾರ ಈ ಯೋಜನೆಗಾಗಿ ಸುಮಾರು 7000 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಈ ಯೋಜನೆಯನ್ನು ಬಜೆಟ್ ನಲ್ಲಿಯೇ ತಿಳಿಸಲಾಗಿದೆ. ಈಗಾಗಲೇ ಈ ಯೋಜನೆಯಡಿ 1.63 ಕೋಟಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಇದನ್ನೂ ಓದಿ: ಪ್ರಸಿದ್ಧ ಶಾಲೆಯ ಶಿಕ್ಷಕರಿಂದ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್!! ಟೀಚರ್ಸ್ ಅರೆಸ್ಟ್!!!
