Home » Deadly Accident: ಮದುವೆ ಸಮಾರಂಭ ಮುಗಿಸಿ ಬರುತ್ತಿದ್ದ ಕಾರು ಟ್ಯಾಂಕರ್‌ ಗೆ ಡಿಕ್ಕಿ; 5 ಮಂದಿ ಸ್ಥಳದಲ್ಲೇ ದಾರುಣ ಸಾವು!!

Deadly Accident: ಮದುವೆ ಸಮಾರಂಭ ಮುಗಿಸಿ ಬರುತ್ತಿದ್ದ ಕಾರು ಟ್ಯಾಂಕರ್‌ ಗೆ ಡಿಕ್ಕಿ; 5 ಮಂದಿ ಸ್ಥಳದಲ್ಲೇ ದಾರುಣ ಸಾವು!!

by Mallika
0 comments
Tamilnadu Deadly Accident

Tamilnadu Deadly Accident: ಪೆಟ್ರೋಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು, ಭೀಕರ ಅಪಘಾತವೊಂದು ನಡೆದಿದೆ. ಈ ದುರ್ಘಟನೆಯಲ್ಲಿ ಐದು ಮಂದಿ ಮೃತಪಟ್ಟ ಘಟನೆ ನಡೆದಿದೆ(Tamilnadu Deadly Accident). ತಿರುಪುರ್‌ ಜಿಲ್ಲೆಯ ಧಾರಾಪುರಂ ಬಳಿಯ ಮನಕಡೌ ಬಳಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ.

ಪೆಟ್ರೋಲ್‌ ಟ್ಯಾಂಕರ್‌ ಕೊಯಮತ್ತೂರು ಜಿಲ್ಲೆಯ ಇರುಗೂರ್‌ನಿಂದ ದ್ರಾಪುರಂಪಳನಿ ರಸ್ತೆಯ ಮಣಕಾಡೌ ಬಳಿ ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಕಾರು ನೇರವಾಗಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತ ಹೊಂದಿದ್ದರೆ ಓರ್ವ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮದುವೆ ಕಾರ್ಯಕ್ರಮ ಮುಗಿಸಿ ಊರಿಗೆ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಕಾರು ಟ್ಯಾಂಕರ್‌ಗೆ ಡಿಕ್ಕಿ ಹೊಡೆದದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪಘಾತದ ರಭಸಕ್ಕೆ ಕಾರು ನುಜ್ಜುಗಜ್ಜಾಗಿದ್ದು, ಕಾರಿನೊಳಗಿದ್ದವರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು ಎಂದು ಅಲ್ಲಿನ ಸ್ಥಳೀಯರು ಮತ್ತು ಪೊಲೀಸರು ತಿಳಿಸಿದ್ದಾರೆ.

ತಮಿಳುಮಣಿ (51), ಚಿತ್ರಾ (49), ಸೆಲ್ವರಾಣಿ (70), ಬಾಲಕೃಷ್ಣ (78) ಮತ್ತು ಕಲಾರಾಣಿ (50) ಮೃತರು.

ಇದನ್ನೂ ಓದಿ: Mangaluru KMC Hospital: ಕೆಎಂಸಿ ಆಸ್ಪತ್ರೆಯ ಖ್ಯಾತ ಮೂತ್ರ ಶಾಸ್ತ್ರಜ್ಞ ಡಾ.ಜಿ.ಜಿ.ಲಕ್ಷ್ಮಣ ಪ್ರಭು ಇನ್ನಿಲ್ಲ!

You may also like

Leave a Comment