Home » Tech News: ಫೋನ್ ಕವರ್’ನಲ್ಲಿ ದುಡ್ಡು ಇತ್ಯಾದಿ ಇಡೋ ಅಭ್ಯಾಸ ಇದ್ಯಾ ? ಮೊಬೈಲ್ ಸ್ಫೋಟ ಆಗ್ಬೋದು ಹುಷಾರ್ !!

Tech News: ಫೋನ್ ಕವರ್’ನಲ್ಲಿ ದುಡ್ಡು ಇತ್ಯಾದಿ ಇಡೋ ಅಭ್ಯಾಸ ಇದ್ಯಾ ? ಮೊಬೈಲ್ ಸ್ಫೋಟ ಆಗ್ಬೋದು ಹುಷಾರ್ !!

0 comments

Tech News: ಮೊಬೈಲ್ (Mobile) ಕವರ್ ನಲ್ಲಿ ಹಣ ಇಡುವ ಹವ್ಯಾಸ ಹೆಚ್ಚಿನವರಿಗೆ ಇರುತ್ತದೆ. ಕೆಲವೊಮ್ಮೆ ಅವಸರದಲ್ಲಿ ಇಟ್ಟರೆ, ಇನ್ನು ಕೆಲವೊಮ್ಮೆ ಸುಲಭವಾಗಿ ಸಿಗಲಿ ಎಂದು ಮೊಬೈಲ್ ಕವರ್ ನಲ್ಲಿ ಹಣ ಇಡುತ್ತೇವೆ ಆದರೆ ಇದರಿಂದ ಅಪಾಯವೂ ಇದೆ. ಈ ರೀತಿ ಮೊಬೈಲ್ ಕವರ್ ನಲ್ಲಿ ನೋಟುಗಳನ್ನು ಇಡುವುದರಿಂದ ಮೊಬೈಲ್ (Tech News) ಬಿಸಿ ಆಗುತ್ತಾ ಹೋಗುತ್ತದೆ.

ಮೊಬೈಲ್ ಕವರ್ ನಲ್ಲಿ ನೋಟು, ಹಣ (money) ಇಡುವುದರಿಂದ ಮೊಬೈಲ್ ಬಿಸಿಯಾಗುವುದಷ್ಟೇ ಅಲ್ಲದೆ ಮೊಬೈಲ್ ಸ್ಪೋಟವಾಗುವ ಸಾಧ್ಯತೆಯೂ ಇದೆ. ಹಾಗಾಗಿ ಮೊಬೈಲ್ ಕವರ್ ನಲ್ಲಿ ಹಣ ಅಥವಾ ಕಾಗದ ಇಡುವವರು ಈ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಇಲ್ಲದಿದ್ದರೆ, ನಿಮ್ಮ ಮೊಬೈಲ್ ಫೋನ್ ಸ್ಫೋಟಗೊಂಡು ಮಾರಣಾಂತಿಕ ಅಪಘಾತ ಸಂಭವಿಸಬಹುದು.

ಫೋನ್‌ನ ಕವ‌ರ್ ನಲ್ಲಿ (mobile cover) ಹಣ ಅಥವಾ ಯಾವುದೇ ರೀತಿಯ ಕಾಗದವನ್ನು ಇಡದಿರುವುದೇ ಒಳಿತು. ಅಂದಹಾಗೆ ನಿಮ್ಮ ಫೋನ್ ಬಿಸಿಯಾಗುವುದರ ಹಿಂದಿನ ದೊಡ್ಡ ಕಾರಣವೆಂದರೆ ಫೋನ್‌ನಲ್ಲಿ ನೋಟ್ ಇಟ್ಟುಕೊಳ್ಳುವುದು ಅಥವಾ ಫೋನ್‌ನಲ್ಲಿ ದಪ್ಪ ಕವರ್ ಹೊಂದಿರುವುದು. ನೀವು ಫೋನ್ ಅನ್ನು ನಿರಂತರವಾಗಿ ಬಳಸಿದಾಗ, ಫೋನ್ ಬಿಸಿಯಾಗಲು ಪ್ರಾರಂಭಿಸುತ್ತದೆ ಮತ್ತು ಸ್ಫೋಟಗೊಳ್ಳಬಹುದು.

ಚಾರ್ಜ್ ಮಾಡುವಾಗ ಫೋನ್ ಬಳಸುವುದರಿಂದ ಫೋನ್ ಬ್ಲಾಸ್ಟ್ ಆಗುತ್ತದೆ. ಫೋನ್‌ನ ಕವರ್ ದಪ್ಪವಾಗಿರುತ್ತದೆ ಮತ್ತು ನೀವು ಅದರಲ್ಲಿ ಹಣವನ್ನು ಇರಿಸಿದರೆ, ಅದು ವೈರ್‌ಲೆಸ್ ಚಾರ್ಜಿಂಗ್‌ನಲ್ಲಿಯೂ ಸಮಸ್ಯೆಗಳನ್ನು ಉಂಟುಮಾಡಬಹುದು. ಫೋನ್‌ನ ಕವರ್‌ನಲ್ಲಿ ನೋಟ್ ಇಡುವುದು ಕೆಲವೊಮ್ಮೆ ನೆಟ್‌ವರ್ಕ್ ಸಮಸ್ಯೆಗಳಿಗೆ ಕಾರಣವಾಗಬಹುದು.

You may also like