Home » LED Lights: ಇನ್ಮುಂದೆ ಮನೆ ಬೆಳಗಲು ಸರ್ಕಾರದ ಫ್ರೀ ಕರೆಂಟೇ ಬೇಕಿಲ್ಲ – ಈ ಬಲ್ಬ್ ಖರೀದಿಸಿ, 24 ಗಂಟೆಯೂ ಮನೆ ಬೆಳಗಿಸಿ

LED Lights: ಇನ್ಮುಂದೆ ಮನೆ ಬೆಳಗಲು ಸರ್ಕಾರದ ಫ್ರೀ ಕರೆಂಟೇ ಬೇಕಿಲ್ಲ – ಈ ಬಲ್ಬ್ ಖರೀದಿಸಿ, 24 ಗಂಟೆಯೂ ಮನೆ ಬೆಳಗಿಸಿ

0 comments
LED Lights

LED Lights: ವಿದ್ಯುತ್ ಪೂರೈಕೆ ಸರಿಯಾಗದೆ ಹೋದರೆ ಆಗುವ ಸಮಸ್ಯೆ ಅಷ್ಟಿಷ್ಟಲ್ಲ !! ಇನ್ನೂ ಮುಂದೆ ನೀವು ವಿದ್ಯುತ್ ಇಲ್ಲದಿದ್ದರೂ ನಿಮ್ಮ ಮನೆಯನ್ನು ಬೆಳಗಿಸಬಹುದು. ಹೇಗೆ ಅಂತ ಯೋಚಿಸುತ್ತಿದ್ದೀರಾ?? ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸೌರಶಕ್ತಿ ಚಾಲಿತ ಎಲ್‌ಇಡಿ ಲೈಟ್‌ಗಳು(LED Lights) ಮಾರುಕಟ್ಟೆಗೆ ಲಗ್ಗೆ ಇಟ್ಟು ಸಂಚಲನ ಮೂಡಿಸಿದೆ. ಇದು ಹೆಚ್ಚು ದುಬಾರಿ ಇರಬಹುದೇನೋ ಎಂದು ನೀವು ಚಿಂತಿಸುವ ಅಗತ್ಯವಿಲ್ಲ. ಕೈಕೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಸೌರಶಕ್ತಿ ಚಾಲಿತ ಎಲ್‌ಇಡಿ ಲೈಟ್‌ಗಳು (Solar Powered LED Lights)ದೊರೆಯಲಿದ್ದು, ಆದರೆ ಖರೀದಿ ಮಾಡುವಾಗ ಸೋಲಾರ್ ಎಲ್ಇಡಿ ಬಲ್ಬ್ ಬ್ಯಾಟರಿ ಬಾಳಿಕೆ ಉತ್ತಮವಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

ಫ್ಲಿಪ್‌ಕಾರ್ಟ್‌ನಲ್ಲಿ ಮೋಷನ್ ಸೆನ್ಸರ್‌ನೊಂದಿಗೆ ಹಲವು ಬಗೆಯ ಸ್ವಯಂಚಾಲಿತ ಬಲ್ಬ್ಗಳು ದೊರೆಯಲಿದೆ.ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಯಾವುದೇ ಬಲ್ಬ್ ಅನ್ನು ಬೇಕಾದರೂ ಖರೀದಿ ಮಾಡಬಹುದು. ಸೌರಶಕ್ತಿ ಚಾಲಿತ ಎಲ್ಇಡಿ ಬಲ್ಬ್ಗಳನ್ನು ಇ-ಕಾಮರ್ಸ್ ಸೈಟ್(E- Commerce)ಫ್ಲಿಪ್‌ಕಾರ್ಟ್‌ನಲ್ಲಿ(Flipkart)ಸಾಮಾನ್ಯ ಎಲ್ಇಡಿ ಬಲ್ಬ್ಗಳ ಬೆಲೆಯಲ್ಲಿ ಖರೀದಿ ಮಾಡಬಹುದು. ಫ್ಲಿಪ್ ಕಾರ್ಟ್ ನಲ್ಲಿ ನಿಮಗೆ 500 ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ “ಸೌರ ಶಕ್ತಿಯ ಎಲ್ಇಡಿ ಬಲ್ಬ್”ಗಳು ದೊರೆಯುತ್ತವೆ.

ಇದನ್ನೂ ಓದಿ: WhatsApp Passkeys: ವಾಟ್ಸಪ್’ಗೆ ಬಂತು ಅತ್ಯದ್ಭುತ ಹೊಸ ಫೀಚರ್- ಇನ್ಮುಂದೆ ಲಾಗಿನ್ ಆಗಲು ಜಸ್ಟ್ ಹೀಗ್ ಮಾಡಿದ್ರೆ ಸಾಕು

You may also like

Leave a Comment