niStrange Calf: ಪ್ರಕೃತಿಯಲ್ಲಿ ಕೆಲವೊಂದು ವಿಚಿತ್ರ ಘಟನೆ ನೋಡುವಾಗ ಆಶ್ಚರ್ಯ ಗಾಬರಿ ಆಗುವುದು ಸಹಜ. ಅಂತಹ ಎಷ್ಟೋ ನಿದರ್ಶನ ನೋಡಿದ್ದೇವೆ ಕೇಳಿದ್ದೇವೆ. ಇದೀಗ ಮನುಷ್ಯನ ಮುಖದ ರೀತಿಯಲ್ಲಿಯೇ ಎಮ್ಮೆಯೊಂದು ಕರುವಿಗೆ ಜನ್ಮ (Strange calf) ನೀಡಿರುವ ವಿಚಿತ್ರ ಘಟನೆ ಆಂಧ್ರಪ್ರದೇಶದ (AndhraPradesh) ಅನಕಾಪಲ್ಲಿ ಜಿಲ್ಲೆಯ ಎಎಲ್ ಪುರಂ ಗ್ರಾಮದಲ್ಲಿ ನಡೆದಿದೆ.
ಹೌದು, ವಬ್ಬಲ ರೆಡ್ಡಿ ಪೋತುರಾಜು ಎಂಬ ರೈತನ ಮನೆಯಲ್ಲಿ ಮನುಷ್ಯನ ಮುಖವನ್ನು ಹೋಲುವಂತೆ ಎಮ್ಮೆಯೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದ್ದು, ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಊರ ಜನರು ಇದನ್ನು ನಿಗೂಢ ಘಟನೆಗೆ ಹೋಲಿಕೆ ಮಾಡಲು ಆರಂಭಿಸಿದ್ದಾರೆ. ಸದ್ಯ ಈ ವಿಚಿತ್ರ ಕರುವನ್ನು ನೋಡಲು ಸ್ಥಳೀಯರು ಹಾಗೂ ಸುತ್ತಮುತ್ತಲಿನ ಜನರು ರೈತನ ಮನೆಗೆ ಮುಗಿಬಿದ್ದಿದ್ದಾರೆ.
ಆದರೆ ಎಮ್ಮೆಯ ಮಾಲೀಕ ಮಾಹಿತಿ ಪ್ರಕಾರ, ಎಮ್ಮೆ ಬೆಳಿಗ್ಗೆ ಏಕಾ ಏಕಿ ಅಸ್ವಸ್ಥಗೊಂಡಿದ್ದು, ಇದರಿಂದ ಆತಂಕಗೊಂಡ ರೈತ ಕೂಡಲೇ ಪಶು ವೈದ್ಯಾಧಿಕಾರಿ ಸಿರಿಶಾ ಎಂಬುವರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪಶು ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಸಹಾಯದಿಂದ ಕರುವನ್ನು ಹೊರತೆಗೆಯಲಾಗಿದ್ದು, ಹುಟ್ಟಿದ ಕರುವಿನ ತಲೆ ಮನುಷ್ಯನಂತೆ ಕಂಡಿದ್ದನ್ನು ಬೆಚ್ಚಿ ಬಿದ್ದಿದ್ದು, ದುರದೃಷ್ಟವಶಾತ್ ಕರು ಮೃತಪಟ್ಟಿದೆ. ಆದರೆ ತಾಯಿ ಎಮ್ಮೆ ಸುರಕ್ಷಿತವಾಗಿದ್ದು, ಆನುವಂಶಿಕ ದೋಷದಿಂದ ಇಂತಹ ಕರುಗಳು ಜನಿಸುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.
